ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಮಟ್ಟದ ಗದ್ದೆ ಉಳುಮೆ ಯತ್ರಗಳ ಹಸ್ತಾಂತರ ಕಾರ್ಯಕ್ರಮ ವರ್ಕಾಡಿ ಗ್ರಾಮಪಂಚಾಯತಿ ಬಾಕ್ರಬೈಲು ನಲ್ಲಿ ಶುಕ್ರವಾರ ಜರುಗಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ 2018-19 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಪುತ್ತಿಗೆ,ಪೈವಳಿಕೆ, ವರ್ಕಾಡಿ, ಮಂಗಲ್ಪಾಡಿ ಗ್ರಾಮಪಂಚಾಯತಿಗಳ ಗದ್ದೆ ಸಮಿತಿಗಳಿಗೆ 25 ಲಕ್ಷ ರೂ.ಮೌಲ್ಯದ ಯಂತ್ರಗಳ ಹಸ್ತಾಂತರ ಈ ಸಂದರ್ಭ ನಡೆಸಲಾಯಿತು.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಯಂತ್ರಗಳ ವಿತರಣೆ ನಡೆಸಿದರು. ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್, ವರ್ಕಾಡಿ ಗ್ರಾಮಪಂಚಾಯತಿ ಸದಸ್ಯೆ ಡಿ.ಸೀತಾ, ಮಾಜಿ ಅಧ್ಯಕ್ಷ ಪಿ.ವಿ.ಅಬೂಬಕ್ಕರ್, ಕೃಷಿ ಸಹಾಯಕ ನಿರ್ದೇಶಕಿ ಕೆ.ನಿಷಾ, ವರ್ಕಾಡಿಯ ಕೃಷಿ ಅಧಿಕಾರಿ ಕೆ.ಷಿಜಿನಾ, ಮಂಜೆಶ್ವರ ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇಂದ್ರನ್, ಗದ್ದೆ ಸಮಿತಿ ಪದಾಧಿಕಾರಿಗಳಾದ ರಮೇಶ್ ಸಫಲ್ಯ, ಬಿ.ತುಕ್ರ, ವಸಂತ ಆರ್.ಆರ್, ಕೆ.ಹಸನ್ ಕುಂಞÂ್ಞ ಮೊದಲಾದವರು ಉಪಸ್ಥಿತರಿದ್ದರು.