HEALTH TIPS

ಯಜ್ಞದಿಂದ ಪ್ರಕೃತಿ ಸಮೃದ್ಧವಾಗುತ್ತದೆ : ಉಳಿಯ ವಿಷ್ಣು ಆಸ್ರ


        ಬದಿಯಡ್ಕ: ಯಜ್ಞದಿಂದ ಪ್ರಕೃತಿ ಸಮೃದ್ಧವಾಗುತ್ತದೆ. ಭೂಮಿಗೆ ಮಳೆ ಬರಬೇಕಾದರೆ ಯಜ್ಞವನ್ನು ನಡೆಸಬೇಕು. ಮಳೆಯಿಂದ ನಮಗೆ ಬೆಳೆ ಲಭಿಸುತ್ತದೆ. ತನ್ಮೂಲಕ ಮನುಷ್ಯನಿಗೆ ಅತೀ ಅಗತ್ಯವಾದ ಆಹಾರ ಲಭಿಸುತ್ತದೆ. ಪ್ರಕೃತಿಯಲ್ಲಿ ಇವತ್ತು ನಮಗೆ ಧಾನ್ಯ ದೊರಕಬೇಕಾದರೆ ದೇವರ ಅನುಗ್ರಹವಿರಬೇಕು ಎಂದು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ತಿಳಿಸಿದರು.
  ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ 2020 ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಪೂರ್ವಭಾವಿಯಾಗಿ ಬೇಳ ಗ್ರಾಮದ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ಭಾನುವಾರ ನಡೆದ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವ ಕಾರ್ಯಕ್ರಮವನ್ನು  ದೀಪಬೆಳಗಿಸಿ ಅನುಗ್ರಹ ಭಾಷಣ ಮಾಡಿದರು.
   ದೇವರೆನ್ನುವುದು ನಿಷೇಧಿಸಲು ಸಾಧ್ಯವಿಲ್ಲದಂತಹ ಪರಮಸತ್ಯವಾಗಿದೆ. ಸನಾತನ ಆಚಾರ ವಿಚಾರಗಳು ನಮ್ಮೆಲ್ಲರ ರಕ್ಷಣೆಗಿದೆ. ಕೃಷಿಯ ಮೂಲಕ ದೇವರ ಸೇವೆಯೆಂಬ ಪ್ರಯತ್ನ ಸಾರ್ಥಕ್ಯವನ್ನು ಪಡೆಯಲಿ. ಮನುಷ್ಯನ ಪ್ರಯತ್ನ ಎಂಬುದು ಶ್ರೇಷ್ಠವಾಗಿದೆ. ಪ್ರತಿಯೊಬ್ಬನಿಗೂ ಒಂದೊಂದು ರೀತಿಯಲ್ಲಿ ಪ್ರಾವೀಣ್ಯತೆಯನ್ನು ಭಗವಂತನು ಅನುಗ್ರಹಿಸುತ್ತಾನೆ. ದೇವರ ಮೇಲಿರುವ ನಮ್ಮ ಅನನ್ಯ ಭಕ್ತಿ ನಮ್ಮನ್ನು ಕಾಪಾಡಲಿ ಎಂದರು.
ಅತಿರುದ್ರ ಯಾಗ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಕೃಷ್ಣ ಮಣಿಯಾಣಿ ಮೊಳೆಯಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಯಾಗಸಮಿತಿಯ ಮಾರ್ಗದರ್ಶಕ ವಸಂತ ಪೈ ಬದಿಯಡ್ಕ ಶುಭಾಶಂಸನೆಗೈದು ಮಾತನಾಡಿ ಒಂದನ್ನು ನೀಡಿದರೆ ಭಗವಂತನು ಸಾವಿರವನ್ನು ಅನುಗ್ರಹಿಸುತ್ತಾನೆ. ನಾವು ಒಂದು ಭತ್ತವನ್ನು ನಾಟಿ ಮಾಡಿದರೆ ಅದರಿಂದ ಲಭಿಸುವ ಅದೆಷ್ಟೋ ಧಾನ್ಯಗಳು ಭಗವಂತನ ವರಪ್ರಸಾದವಾಗಿದೆ ಎನ್ನುವ ಸತ್ಯವನ್ನು ನಾವು ಕಂಡುಕೊಳ್ಳಬೇಕು. ಕಷ್ಟಪಡುವ ಕೃಷಿಕನೇ ಇಂದು ಸಂತೃಪ್ತ ಜೀವಿಯಾಗಿದ್ದು, ನಿತ್ಯ ಭಗವಂತನ ನಾಮಸ್ಮರಣೆಯನ್ನು ಮಾಡುವ ಮೂಲಕ ಪುಣ್ಯವಂತನಾಗುತ್ತಾನೆ ಎಂದರು. ಧಾರ್ಮಿಕ ಮುಖಂಡ ಜಯದೇವ ಖಂಡಿಗೆ ಮಾತನಾಡಿ ಯಾಗದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ನ್ಯಾಯವಾದಿ ಸತೀಶ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ನೀರ್ಚಾಲು ವಲಯ ಯಾಗ ಸಮಿತಿಯ ಗೌರವಾಧ್ಯಕ್ಷ ರಾಮ ಪಾಟಾಳಿ, ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾ.ಪಂ.ಸದಸ್ಯ ಶಂಕರ ಡಿ., ಡಾ| ಜಯಪ್ರಕಾಶ ನಾಯಕ್, ರಾಮಕೃಷ್ಣ ಆಳ್ವ, ನಾರಾಯಣ ರೈ, ಸೂರ್ಯಪ್ರಕಾಶ, ಕುಂಜಾರು ಶ್ಯಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದರು. ಮೋಹನದಾಸ ರೈ ಸ್ವಾಗತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಮ್ಯಲತಾ ವಂದಿಸಿದರು.
                ಹಿರಿಯ ಕೃಷಿಕರಿಗೆ ಸನ್ಮಾನ :
    ಊರಿನಲ್ಲಿ ಅನೇಕ ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಹಿರಿಯರಾದ ತಿಮ್ಮಪ್ಪ ಪಾಟಾಳಿ ಚೌಕಾರು, ಸೀತು, ಮದರು, ಬಡದಿ, ಸುಶೀಲ, ಮೀನಾಕ್ಷಿ ಹಾಗೂ ಗದ್ದೆಯನ್ನು ಉಳುಮೆ ಮಾಡಿದ ಎಡ್ವಿನ್ ಕೆದೋಡಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ನಂತರ ಗಂಜಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries