ಕಾಸರಗೋಡು: ಕಾಸರಗೋಡು ತಾಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವ ಇಂದು ಹಾಗೂ ನಾಳೆ ಚೆಂಗಳ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಚೆರ್ಕಳ ಹೈಯರ್ ಸೆಕೆಂಡರಿ ಶಾಲೆ, ಚೆರ್ಕಳ ಮಾರ್ತೋಮಾ ಶಾಲೆಗಳಲ್ಲಿ ನಡೆಯಲಿವೆ.
ತಾಲೂಕಿನ ವಿವಿಧ ಸಿ.ಡಿ.ಎಸ್.ಯೂನಿಟ್‍ಗಳಿಂದ ಸಾವಿರಾರು ಮಂದಿ ಪ್ರತಿಭೆಗಳು ಈ ಕಲೋತ್ಸವದಲ್ಲಿ ಭಾಗವಹಿಸುವರು.
ಚೆರ್ಕಳ ಹೈಯರ್ ಸೆಕೆಂಡರಿ ಸಾಲೆಯ ಸಭಾಂಗಣದಲ್ಲಿ ಆ.2 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಕಲೋತ್ಸವವನ್ನು ಉದ್ಘಾಟಿಸುವರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂಞÂ ಚಾಯಿಂಡಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿರುವರು. ಸಾಮಾಜಿಕ, ರಾಜಕೀಯ ವಲಯಗಳ ಗಣ್ಯರು ಭಾಗವಹಿಸುವರು. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಕುಟುಂಬಶ್ರೀ ಸದಸ್ಯರೂ ಸಕ್ರಿಯರಾಗುವಂತೆ ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ತಿಳಿಸಿದರು.
ಆ.3 ರಂದು ಸಂಜೆ 5 ಗಂಟೆಗೆ ಚೆರ್ಕಳ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಷಾಹಿನಾ ಬಶೀರ್ ಅಧ್ಯಕ್ಷತೆ ವಹಿಸುವರು. ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ಬಹುಮಾನ ವಿತರಿಸುವರು.