ಮುಳ್ಳೇರಿಯ : ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ 2018-19ರ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಅಡೂರಿನ ಸಂಗೀತ ವಿಧ್ಯಾರ್ಥಿಗಳಾದ ನಂದಿತಾ ಕೆ ಆರ್, ರಾಜಿತಾ ಕೆ ಆರ್, ಪ್ರಮಿತಾ ಎ ಹಾಗೂ ಪ್ರತಿಮಾ ಎ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮೆರೆದಿದ್ದಾರೆ. ಇವರೆಲ್ಲರೂ ಸುಳ್ಯದ ಶ್ರುತಿಲಯ ಸಂಗೀತ ಶಾಲೆಯ ವಿದುಷಿ ಶಂಕರಿಮೂರ್ತಿ ಬಾಳಿಲ ಅವರ ಶಿಷ್ಯೆಯರು ಹಾಗೂ ಅಡೂರು ಸರ್ಕಾರಿ ಪ್ರೌಢಶಾಲೆಯ ಹೆಳೆ ವಿದ್ಯಾರ್ಥಿಗಳಾಗಿದ್ದಾರೆ.
ನಂದಿತ ಕೆ ಆರ್ : ಇವರು ಸೀನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇಖಡಾ 95 ಅಂಕಗಳನ್ನು ಪಡೆದು ಇದೀಗ ಸುಳ್ಯ ಎನ್‍ಎಂಪಿಯು ಕಾಲೇಜಿನ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಕೇಂದ್ರ ಸರ್ಕಾರದ ಸಾಂಸ್ಕøತಿಕ ಇಲಾಖೆಯಿಂದ ಸಿಸಿಆರ್‍ಟಿ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಇವರು ಅಡೂರಿನ ಕಾಯರ್ತಿಮಾರು ರಾಜಾರಾಮ ಸರಳಾಯ ಹಾಗೂ ಲತಾ ದಂಪತಿ ಪುತ್ರಿ.
ರಾಜಿತಾ ಕೆ ಆರ್ : ಇವರು ಸೀನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇಖಡಾ 89.2 ಅಂಕ ಪಡೆದು ಉತ್ತೀರ್ಣರಾಗಿದ್ದು, ಸುಳ್ಯ ಎನ್‍ಎಂಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಅಡೂರಿನ ಕಾಯರ್ತಿಮಾರು ರಾಜಾರಾಮ ಸರಳಾಯ ಹಾಗೂ ಲತಾ ದಂಪತಿ ಪುತ್ರಿ.
ಪ್ರಮಿತಾ ಎ : ಇವರು ಸೀನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇಖಡಾ 84 ಅಂಕ ಪಡೆದು ಇದೀಗ ಪುತ್ತೂರು ಸೈಂಟ್ ಪಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಎಂಎಸ್ಸಿ(ಭೌತಶಾಸ್ತ್ರ) ವಿದ್ಯಾರ್ಥಿನಿಯಾಗಿದ್ದಾರೆ. ಇವರು ಅಡೂರಿನ ಶ್ರೀಪ್ರಸಾದ್ ಭಾರಿತ್ತಾಯ ಹಾಗೂ ಪದ್ಮಾ ಎಚ್ ದಂಪತಿ ಪುತ್ರಿ.
ಪ್ರತಿಮಾ ಎ : ಇವರು ಸೀನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇಖಡಾ 82 ಅಂಕ ಪಡೆದು ಉತ್ತೀರ್ಣರಾಗಿದ್ದು ಇದೀಗ ಪುತ್ತೂರು ಸೈಂಟ್ ಪಿಲೋಮಿನಾ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾರೆ. ಇವರು ಅಡೂರಿನ ಶ್ರೀಪ್ರಸಾದ್ ಭಾರಿತ್ತಾಯ ಹಾಗೂ ಪದ್ಮಾ ಎಚ್ ದಂಪತಿ ಪುತ್ರಿ.