ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಸಾಕ್ಷರತಾ ಕಲಿಕೆ, ಹತ್ತನೇ ಸಮತ್ವ ತರಗತಿಯ ನೇತೃತ್ವದಲ್ಲಿ ವಾಚನಾ ದಿನಾಚರಣೆ ಶ್ರೀಸತ್ಯನಾರಾಯಣ ಪ್ರೌಢ ಶಾಲೆ ಪೆರ್ಲದಲ್ಲಿ ಇತ್ತೀಚೆಗೆ ನಡೆಯಿತು.
ಪೆರ್ಲ ಶ್ರೀಸತ್ಯನಾರಾಯಣ ಪ್ರೌಢ ಶಾಲಾ ಶಿಕ್ಷಕ ವೇಣುಗೋಪಾಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಂಚಾಯತಿ ಜೊತೆ ಕಾರ್ಯದರ್ಶಿ ಲತೀಫ್ ಭಾಗವಹಿಸಿ ಮಾತನಾಡಿ, ಓದು ಎನ್ನುವುದು ಅರಿವಿನ ಸಾಗರ. ಓದಿದ ಜಾÐನಕ್ಕೆ ಮಿಗಿಲಾದುದು ಬೇರೊಮದು ಇಲ್ಲ. ಓದಿನ ಮೂಲಕ ವ್ಯಕ್ತಿಯ ಜ್ಞಾನ ವಿಕಸನದ ಜೊತೆಗೆ ವ್ಯಕ್ತಿತ್ವ ಬೆಳಗುತ್ತದೆ ಎಂದರು.
ಎಣ್ಮಕಜೆ ಹತ್ತನೇ ಸಮತ್ವ ಸಂಯೋಜಕ ಆನಂದ ಕುಕ್ಕಿಲ ಸ್ವಾಗತಿಸಿ, ಹಿಂ.ವರ್ಗ ಪ್ರಮೋಟರ್ ಅಶೋಕ್ ಸಾಯ ವಂದಿಸಿದರು.