ಪೆರ್ಲ: ಪೆರ್ಲದ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ ಸಂಘಟನೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆ ನೇತೃತ್ವದಲ್ಲಿ ಕಕ9ಟಕ ಮಾಸದ ಪ್ರಯುಕ್ತ ಇಂದು (ಭಾನುವಾರ) "ಅಕ್ಷರದ ಆಟಿ ಅಟ್ಟಣೆ" ವಿಶೇಷ ಸಾಹಿತ್ತಿಕ ಕಾರ್ಯಕ್ರಮ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ, ಉಳ್ಳಾಲ್ತಿ, ಶ್ರೀವಿಷ್ಣುಮೂರ್ತಿ ದೇವಾಲಯದ ಸಭಾ ಭವನದಲ್ಲಿ ಬೆಳಿಗ್ಗೆ 9.30 ರಿಂದ ಅಪರಾಹ್ನ 3ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಗಿ ನಡೆಯುವ ಸಭಾ ಕಾರ್ಯಕ್ರಮವನ್ನು ಉಕ್ಕಿನಡ್ಕ ಶ್ರೀಸಹಸ್ರಾಕ್ಷ ವೈದ್ಯಶಾಲೆಯ ನಿರ್ದೇಶಕ ಡಾ.ಜಯಗೋವಿಂದ ಉಕ್ಕಿನಡ್ಕ ಅವರು ಉದ್ಘಾಟಿಸುವರು. ಶಿಕ್ಷಕ, ಯಕ್ಷಗಾನ ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ, ಇಡಿಯಡ್ಕ ಶ್ರೀಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಸದಾನಂದ ಮಾಸ್ತರ್ ಕುದ್ವ, ಹಿರಿಯ ಸಾಹಿತಿ ಹರೀಶ್ ಪೆಲ9, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಅಪರಾಧ ಪತ್ತೆ ವಿಭಾಗದ ಅಧಿಕಾರಿ ಪರಮೇಶ್ವರ ನಾಯ್ಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಯಿತ್ರಿ ಚೇತನಾ ಕುಂಬಳೆ ಮೊದಲಾದವರು ಉಪಸ್ಥಿತರಿರುವರು.
ಈ ಸಂದರ್ಭ "ಆಟಿ ಆಚರಣೆ-ಪರಂಪರೆ ಮತ್ತು ಮಹಾಕಾವ್ಯ ರಾಮಾಯಣ-ತೌಳವ ನಂಬಿಕೆ" ವಿಷಯದಲ್ಲಿ ವಾಂತಿಚ್ಚಾಲ್ ಮಂತ್ರಮೂರ್ತಿ ದೈವ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ವಿಶೇಷ ಉಪನ್ಯಾಸ ನೀಡುವರು. ಬಳಿಕ ಆಯೋಜಿಸಲಾದ ಪುಸ್ತಕ ವಿಮರ್ಶಾ ಕಾರ್ಯಕ್ರಮದಲ್ಲಿ ಶಿಕ್ಷಕಿ, ಸಂಶೋಧಕಿ ಸೌಮ್ಯಾ ಪ್ರಸಾದ್ ಕಿಳಿಂಗಾರು ಅವರು ಎಚ್.ಎಸ್.ವೆಂಕಟೇಶಮೂರ್ತಿ ಅವರ "ಮಂಥರೆ" ಕೃತಿಯ ವಿಮರ್ಶೆ ನಡೆಸುವರು. ಬಳಿಕ ಮಹಾಕಾವ್ಯ ರಾಮಾಯಣ ಆಧಾರಿತ ವಿಶೇಷ ಕಥೆ ಹಾಗೂ ಕವಿತೆಗಳ ಗೋಷ್ಠಿ ನಡೆಯಲಿದ್ದು, ಭರತನಾಟ್ಯ ಕಲಾವಿದೆ, ಕವಯಿತ್ರಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಸುರೇಶ್ ನೆಗಲಗುಳಿ ಚಾಲನೆ ನೀಡುವರು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಸಾಹಿತಿಗಳು ಪಾಲ್ಗೊಳ್ಳುವರು.