ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಸ್ಥಾನವೆಂದೇ ಖ್ಯಾತ ಪಡೆದ ಮಂಜೇಶ್ವರ ಶ್ರೀಅನಂತೇಶ್ವರ ದೇವಾಲಯದಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ವಿಜಾಧಿ ವಿಧಾನಗಳು ಇಂದು(ಸೋಮವಾರ) ಇಂದು ನಡೆಯಲಿದೆ.
ಕಾರ್ಯಕ್ರಮದ ಭಾಗವಾಗಿ ಮುಂಜಾನೆ 5ರ ಸುಮಾರಿಗೆ ನಾಡಿನ ಉದ್ದಗಲದಿಂದ ಭಕ್ತ ಜನರು ಬಂದು ಎಳನೀರು ಹಾಗೂ ಕ್ಷೀರಾಭಿಷೇಕ ಸೇವೆ ಸಲ್ಲಿಸುತ್ತಾರೆ. ವಿಶೇಷವೆಂದರೆ ವಾಸುಕೀ ಪೂಜೆ ಬೆಳಿಗ್ಗೆ ನೆರವೇರುತ್ತದೆ. ವಾರ್ಷಿಕ ನಾಗರ ಪಂಚಮಿಯಂದು ಮಾತ್ರ ಇಲ್ಲಿ ವಾಸುಕೀ ಪೂಜೆ ನಡೆಸಲಾಗುತ್ತದೆ.
ಹಿನ್ನೆಲೆ:
ಮಂಜೇಶ್ವರದ ಶ್ರೀಅನಂತೇಶ್ವರ ಕ್ಷೇತ್ರದ ಕಾರಣದಿಂದಲೇ ಈ ಸ್ಥಳಕ್ಕೆ ಈ ನಾಮಧೇಯ ಬಂತೆಂಬ ಪ್ರತೀತಿ ಇದೆ. ಶ್ರೀಅನಂತೇಶ್ವರನ ಸಾನ್ನಿಧ್ಯದ ಕಾರಣ ಈ ಹೆಸರು ಬಂತೆಂದು ಇತಿಹಾಸ ತಿಳಿಸುತ್ತದೆ. ಶೇಷರೂಪಿ ಅನಂತ ದೇವರು ಇಲ್ಲಿಯ ಪ್ರಧಾನ ದೇವತೆಯಾಗಿದ್ದು, ಇಲ್ಲಿಗೆ ಸಮೀಪದ ಕಣ್ವತೀರ್ಥ ಕ್ಷೇತ್ರಕ್ಕೆ ಸಂದರ್ಶಿಸಿದ್ದ ಶ್ರೀಮದ್ವಾಚಾರ್ಯರು ಅನಂತೇಶ್ವರ ದೇವಾಲಯವನ್ನೂ ಸಂಸರ್ಶಿಸಿ ಪ್ರಾರ್ಥನೆ ಸಲ್ಲಿಸಿದರೆಂದು ತಿಳಿದುಬರುತ್ತದೆ. 1200 ವರ್ಷಗಳಷ್ಟು ಪ್ರಾಚೀನವಾದ ಈ ಕ್ಷೇತ್ರ ಜಿಎಸ್ ಬಿ ಸಮಾಜ ಬಾಂಧವರಿಂದ ನಡೆಸಲ್ಪಡುತ್ತದೆ.