ಕಾಸರಗೋಡು: ಗೈಲ್ ಗ್ಯಾಸ್ ಪೈಪ್ ಲೈನ್ ಹಾದುಹೋಗುವ ಪ್ರಕ್ರಿಯೆಗೆ ತಮ್ಮ ಜಾಗ ಬಿಟ್ಟು ಕೊಟ್ಟ ಹತ್ತು ಸೆಂಟ್ಸ್ ಗಿಂತಲೂ ಕಡಿಮೆ ಸ್ವಂತ ಜಾಗ ಹೊಂದಿರುವ ಮಂದಿಗೆ ರಾಜ್ಯ ಸರಕಾರದ ಆದೇಶ ಪ್ರಕಾರ 5 ಲಕ್ಷ ರೂ. ಸಾಂತ್ವನ ಪರಿಹಾರ ನಿಧಿ ವಿತರಣೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಚೆಕ್ ವಿತರಣೆ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಗೇಲ್ ನಿರ್ಮಾಣ ಹಿರಿಯ ಪ್ರಬಂಧಕ ಆಂಟನಿ ಡಿಕ್ರೂಸ್, ಕಂದಾಯ ವಿಭಾಗ ಪ್ರತಿನಿಧಿ ಪಿ.ಕುಂ ಞÂ್ಞ ಕಣ್ಣನ್,ಪಿ.ರಾಘವನ್, ಎಚ್.ಎ.ಎಲ್. ಪ್ರಧಾನ ಪ್ರಬಂಧಕ ರಾಜೀವ್ ಕುಮಾರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಹಣಕಾಸು ಅಧಿಕಾರಿ ಕೆ.ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಯ 15 ಕುಟುಂಬಗಳು ಈ ಯೋಜನೆಯಲ್ಲಿ ಸೇರಿವೆ. ಕೇಂದ್ರ ಇಂಧನ ಮಂತ್ರಾಲಯದ ನಿಬಂಧನೆಗಳ ಪ್ರಕಾರ ಜಾಗದ ಮಾಲೀಕರಿಗೆ ನೀಡುವ ಜಾಗ ಮತ್ತು ಕೃಷಿ ಬೆಳೆಗಳ, ಕಟ್ಟಡದ ನಷ್ಟ ಪರಿಹಾರವಲ್ಲದೆ, ರಾಜ್ಯ ಸರಕಾರದ ಆದೇಶದಂತೆ ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(ಗೇಲ್) ಈ ನಿಧಿ ವಿತರಿಸಿದೆ. ತೆಕ್ಕಿಲ್ ಗ್ರಾಮದಲ್ಲಿ 7, ಮಡಿಕೈಯಲ್ಲಿ 2, ಪೆರಿಯದಲ್ಲಿ 3, ಪೇರಾಲ್ ಮತ್ತು ಪನೆಯಾಲದಲ್ಲಿ ತಲಾ ಒಂದು ಕುಟುಂಬಗಳು ಈ ಧನಸಹಾಯ ಪಡೆದುಕೊಂಡಿವೆ. ಹತ್ತು ಸೆಂಟ್ಸ್ ಗಿಂತ ಕಡಿಮೆ ಜಾಗ ಇದ್ದವರಿಂದ 2 ಮೀಟರ್ ಜಾಗ ಗೇಲ್ ವಹಿಸಿಕೊಂಡಿದೆ. ಇಂಧನ-ಡುಗೆ ಅನಿಲ ಕಾಯಿದೆ ಪ್ರಕಾರ ಫೇರ್ ವ್ಯಾಲ್ಯೂನ ಶೇ 10 ನಿಧಿ ನಷ್ಟಪರಿಹಾರ ರೂಪದಲ್ಲಿ ನೀಡಲಾಗಿದೆ.