ಕಾಸರಗೋಡು: ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ರಾಜ್ಯ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ, ಎಲ್.ಐ.ಸಿ. ಆಫ್ ಇಂಡಿಯಾ ಜಂಟಿ ವತಿಯಿಂದ ಜಾರಿಗೊಳಿಸುವ ವಾತ್ಸಲ್ಯ ನಿಧಿ ಯೋಜನೆಗೆ ಅರ್ಜಿ ಕೋರಲಾಗಿದೆ.
ಹೆಣ್ಣು ಮಗು ಜನಿಸಿ 9 ತಿಂಗಳೊಳಗೆ ಹೆತ್ತವರು(ಹೆತ್ತವರು ಬದುಕಿರದೇ ಇದ್ದಲ್ಲಿ ಕಾನೂನು ರೀತ್ಯಾ ಪೆÇೀಷಕರು) ಯೋಜನೆಯಲ್ಲಿ ನೋಂದಣಿ ನಡೆಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಕೌಟುಂಬಿಕ ಆದಾಯ ಮಿತಿ ಒಂದು ಲಕ್ಷ ರೂ. ಈ ಯೋಜನೆಯಲ್ಲಿ ಒಳಗೊಂಡಿರುವ ಹೆಣ್ಣು ಮಗು 15ನೇ ವರ್ಷ ಪ್ರಾಯ ಹೊಂದಿದಾಗ 13,80,000 ರೂ. 4 ಕಂತುಗಳಲ್ಲಿ ಆಕೆಯ ಹೆಸರಲ್ಲಿ ಠೇವಣಿಗೊಳ್ಳಲಿದ್ದು, ಆಕೆಗೆ 18 ವರ್ಷ ಪ್ರಾಯವಾದಾಗ 3 ಲಕ್ಷ ರೂ. ಆಕೆಗೆ ಲಭಿಸಲಿದೆ. ವಿಮೆ ಕೇಂದ್ರಿತ ಯೋಜನೆಯಾಗಿರುವ ಹಿನ್ನೆಲೆಯಲ್ಲಿ 8 ವರ್ಷ ಪ್ರಾಯದ ನಂತರ ಯೋಜನೆಯಲ್ಲಿ ಸೇರಿರುವ ಆಕೆಗೆ ವಿಮೆ ಕವರೇಜ್ ಲಭಿಸಲಿದೆ. ಹೆತ್ತವರ, ಪೆÇೀಷಕರು ಮೃತರಾದ್ಲಲಿ, ಅಪಘಾತದಲ್ಲಿ ವಿಕಲ ಚೇತನತೆ ಉಂಟಾದಲ್ಲಿ ಎಲ್.ಐ.ಸಿ. ಆಫ್ ಇಂಡಿಯಾ ನೀಡುವ ಸೌಲಭ್ಯಗಳು ಲಭಿಸಲಿವೆ.
ಜೊತೆಗೆ ಹೆಣ್ಣು ಮಗು, ಒಬ್ಬ ಸಹೋದರ ಯಾ ಸಹೋದರಿ ಇವರಿಗೆ 9 ರಿಂದ 12ನೇ ತರಗತಿ ವರೆಗಿನ ಕಲಿಕೆಗೆ 1200 ರೂ. ವಾರ್ಷಿಕ ವಿದ್ಯಾರ್ಥಿ ವೇತನ ಲಭಿಸಲಿದೆ. ಅರ್ಹರಾದ ಪರಿಶಿಷ್ಟ ಜಾತಿಯ ಕುಟುಂಬಗಳು ಬಾಲಕಿಯ ಜನನ ಪತ್ರ, ಹೆಣ್ಣು ಮಗು ಜನಿಸಿ 90 ದಿನದಲ್ಲಿ ನೀಡಬೇಕಿರುವ ಕಡ್ಡಾಯ ಪ್ರತಿರೋಧ ಚುಚ್ಚು ಮದ್ದು ಪಡೆದ ದಾಖಲೆ ಪತ್ರಗಳು, ಹೆತ್ತವರ ಆಧಾರ್ ಕಾರ್ಡ್, ಪಡಿತರ ಚೀಟಿ, ಕುಟುಂಬ ಫೆÇೀಟೋ, ಕೌಟುಂಬಿಕ ಆದಾಯ ಪತ್ರ, ಜಾತಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಸಹಿತ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿ ಮತ್ತು ಅರ್ಜಿ ಫಾರಂಗಳಿಗೆ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು.