ಉಪ್ಪಳ: ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಕುರುಡಪದವು ಇದರ ವತಿಯಿಂದ ರಕ್ತದಾನ ಮತ್ತು ಉಚಿತ ವೈದ್ಯಕೀಯ ಶಿಬಿರ ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲ್‍ನಲ್ಲಿ ಇತ್ತೀಚೆಗೆ ಜರಗಿತು.
ವೈದ್ಯಾಧಿಕಾರಿ ಡಾ.ರಾಜಾರಾಮ್ ಭಟ್ ದೇವಕಾನ ಉದ್ಘಾಟಿಸಿದರು. ಗೋಪಾಲಕೃಷ್ಣ ಭಟ್ ಕುರಿಯ ಅಧ್ಯಕ್ಷತೆ ವಹಿಸಿದ್ದರು. ಅಬೂಬಕ್ಕರ್ ಕುರುಡಪದವು, ಗ್ರಾ.ಪಂ. ಸದಸ್ಯೆ ತಾರಾ ವಿ.ಶೆಟ್ಟಿ, ಕುರುಡಪದವು ಆರೋಗ್ಯ ಪರಿವೀಕ್ಷಕಿ ಸೇತುಲಕ್ಷ್ಮೀ ಕೆ.ಸಿ, ದೇರಳಕಟ್ಟೆ ಆಸ್ಪತ್ರೆಯ ವೈದ್ಯೆ ಡಾ.ಶ್ರಾವ್ಯ ಉಪಸ್ಥಿತರಿದ್ದರು.
100 ಕ್ಕೂ ಅಧಿಕ ಮಂದಿ ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದರು. 49ಮಂದಿ ರಕ್ತದಾನಗೈದರು. ಪ್ರಶಾಂತ್ ಕೊಮ್ಮಂಗಳ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಪೆÇಂಗರೆಕಾಡು ಸ್ವಾಗತಿಸಿದರು. ರಂಜಿತ್ ವಂದಿಸಿದರು.