ಉಪ್ಪಳ: ರೈತ ಹೋರಾಟಗಳಲ್ಲಿ ಹುತಾತ್ಮರಾದ ಪೈವಳಿಕೆ ಮಹಾಬಲ ಶೆಟ್ಟಿ, ಸುಂದರ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ ಸಂಸ್ಮರಣೆ ಇಂದು(ಸ.1) ಅಪರಾಹ್ನ 3.30 ರಿಂದ ಪೈವಳಿಕೆ ನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಬೋಳಂಗಳ ಹುತಾತ್ಮ ಮಂಟಪದಲ್ಲಿ ಪುಷಪಾರ್ಚನೆ ನಡೆಯಲಿದೆ. ಅಪರಾಹ್ನ 3.30ಕ್ಕೆ ಬೋಳಂಗಳದಿಂದ ಪೈವಳಿಕೆ ನಗರಕ್ಕೆ ಬೃಹತ್ ಕಾರ್ಮಿಕ ಮೆರವಣಿಗೆ ಆಗಮಿಸಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಉದ್ಘಾಟಿಸುವರು. ಡಿವೈಎಫ್‍ಐ ಗುಜರಾತ್ ರಾಜ್ಯ ಸಮಿತಿ ಸದಸ್ಯ ಸಹೀದ್ ರೂಮಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುವರು. ಮುಖಂಡರಾದ ಕೆ.ಎ.ಸತೀಶ್ಚಂದ್ರನ್, ಸಿ.ಎಚ್.ಕುಂಞÂಂಬು, ಡಾ.ವಿ.ಪಿ.ಪಿ.ಮುಸ್ತಫ, ಕೆ.ಆರ್.ಜಯಾನಂದ, ಎ.ಅಬೂಬಕರ್, ಬಿ.ಸೀತಾರಾಮ ಶೆಟ್ಟಿ, ಭಾರತೀ ಜೆ.ಶೆಟ್ಟಿ ಉಪಸ್ಥಿತರಿರುವರು.