HEALTH TIPS

ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ- ತಾಯ ಎದೆಹಾಲು ಜಗತ್ತಿನ ದೊಡ್ಡ ದಿವ್ಯ ಔಷಧ : ವಿ.ವಿ.ರಮೇಶನ್


         ಕಾಸರಗೋಡು: ತಾಯ ಎದೆಹಾಲು ಜಗತ್ತಿನ ಅತಿದೊಡ್ಡ ದಿವ್ಯ ಔಷಧವಾಗಿದೆ. ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳಿಗೂ ಇದಕ್ಕೆ ಸಮನಾದ ಔಷಧ ತಯಾರಿಸಲು ಈ ವರೆಗೆ ಸಾಧ್ಯವಾಗಿಲ್ಲ ಎಂದು ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಭಿಪ್ರಾಯಪಟ್ಟರು.
         ಕಾಂಞಂಗಾಡ್ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
     ಜಿಲ್ಲಾ ಐ.ಸಿ.ಡಿ.ಎಸ್.  ಪೆÇ್ರೀಗ್ರಾಂ ಆಫೀಸ್, ಆರೋಗ್ಯ ಇಲಾಖೆ, ಇಂಡಿಯನ್ ಅಸೋಸಿಯೆಶನ್ ಆಫ್ ಪೀಡಿಯಾಟ್ರಿಕ್ಸ್ ಜಂಟಿ ವತಿಯಿಂದ ಸಮಾರಂಭ ಜರಗಿತು. 
ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಮಕ್ಕಳು ಬಹು ಸುಂದರರಾಗಿದ್ದಾರೆ. ತಾಯಿಯ ಮುಖದ ತೇಜಸ್ಸು ಮಕ್ಕಳ ಮುಖದಲ್ಲಿ ಪ್ರತಿಫಲಿಸುತ್ತದೆ. ಕೇರಳದಲ್ಲಿ ಗರ್ಭಿಣಿಯರಿಗೆ ಲಭಿಸುವ ಪೆÇೀಷಣೆಯೇ ಇದರ ಗುಟ್ಟು. ಮುಂದಿನ ಜನಾಂಗ ಮಾತೃತ್ವದ ಎಲ್ಲ ಮೌಲ್ಯಗಳನ್ನೂ ಅರಿತುಕೊಂಡು ಬೆಳೆಯಬೇಕು ಎಂದವರು ವಿಶ್ಲೇಷಿಸಿದರು.
ರೋಗ ಪ್ರತಿರೋಧ ನಡೆಸುವ ಸಾಮಾಜಿಕ ವಾತಾವರಣ ನಿರ್ಮಾಣ ನಡೆಸಲು ಇಂದಿನ ಆಡಳಿತೆಗೆ ಸಾಧ್ಯವಾಗಿದೆ. ನಿಫಾ ವೈರಸ್‍ನ್ನು ಹಿಂದಿಕ್ಕಲು ನಮಗೆ ಸಧ್ಯವಾಗಿದೆ. ಆರೋಗ್ಯ ರಂಗದಲ್ಲಿ ಇನ್ನೂ ಬಹುದೂರ ಸಾಗಬೇಕಾದ ಅನಿವಾರ್ಯತೆಯಿದ್ದರೂ, ನಮಗದು ಸಾಧ್ಯವಾಗಲಿದೆ ಎಂದವರು ತಿಳಿಸಿದರು.
       ರೀಪೆÇ್ರಡೆಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ ಜಿಲ್ಲಾ ಅ„ಕಾರಿ ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಐ.ಸಿ.ಡಿಎಸ್. ಜಿಲ್ಲಾ ಪೆÇ್ರೀಗ್ರಾಂ ಆಫೀಸರ್ ಕವಿತಾರಾಣಿ ರಂಜಿತ್ ಸಪ್ತಾಹದ ಸಂದೇಶ ತಿಳಿಸಿದರು. ಕಾರ್ಯಕ್ರಮ ಅಂಗವಾಗಿ ನಡೆದ ವಿಚಾರಸಂಕಿರಣದಲ್ಲಿ ಶಿಶುರೋಗ ಪರಿಣತರಾದ ಡಾ.ವಿ.ಸುರೇಶನ್, ಡಾ.ಎಚ್.ಲಿಂಡಾ ಉಪನ್ಯಾಸ ಮಾಡಿದರು. ಜಿಲ್ಲಾ ಡೆಪ್ಯೂಟಿ ಮಾಸ್ ಮೀಡಿಯಾ ಆಫೀಸರ್ ಎಸ್.ವಿ.ಅರುಣ್ ಲಾಲ್, ಎನ್.ಎಚ್.ಎಂ. ಪ್ರತಿನಿಧಿ ಸುರೇಶ್ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries