HEALTH TIPS

ಜಿಲ್ಲೆಯ ಶಿಕ್ಷಣ ವಲಯದ ಸಮಗ್ರ ಅಭಿವೃದ್ಧಿಗೆ ಡಯಟ್ ಸಿದ್ಧತೆ


                   
          ಕಾಸರಗೋಡು: ಜಿಲ್ಲೆಯ ಶಿಕ್ಷಣ ವಲಯದ ಸಮಗ್ರ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಹೆತ್ತವರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರ (ಡಯಟ್ ಸಂಸ್ಥೆ)ದ ಚಟುವಟಿಕೆಗಳ ಸಂಬಂಧ ನಡೆದ ಸಲಹಾ ಸಮಿತಿ ಸಭೆ ಗಂಭೀರ ಚಿಂತನೆ ನಡೆಸಿದೆ.
          ಸಂಸ್ಥೆಯ ಅಕಾಡೆಮಿಕ್ ಚಟುವಟಿಕೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳಿಗೆ ರೂಪು ನೀಡಿದೆ. ಜಿಲ್ಲೆಯ ಪ್ರೀಮೆಟ್ರಿಕ್ ಹಾಸ್ಟೆಲ್‍ಗಳು ನಡೆಸಿದ ಶಿಕ್ಷಣ ಗುಣಮಟ್ಟದ ಕುರಿತು ಅಧ್ಯಯನ ನಡೆಸಲಾಗುವುದು. ಗಣಿತದ ಕಲಿಕೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಣಕ್ಕರಿವ್ (ಲೆಕ್ಕದ ಅರಿವು) ಕಾರ್ಯಕ್ರಮ ನಡೆಸಲಾಗುವುದು. ವಿಜ್ಞಾನ ಅಧ್ಯಯನ ಪೆÇ್ರೀತ್ಸಾಹ ಕಾರ್ಯಕ್ರಮ ನಡೆಸಲಾಗುವುದು. ಜೈವಿಕ ವೈವಿಧ್ಯ ಉದ್ಯಾನಗಳನ್ನು ಸುಧಾರಿತ ರೀತಿಗೆ ಪೂರಕವಾಗಿ ಶಿಕ್ಷಣಾಲಯಗಳ ದಾಖಲೀಕರಣನಡೆಸಲಾಗುವುದು. ಎನ್.ಎಸ್.ಎಸ್., ಯು.ಎಸ್.ಎಸ್. ನ್ಯಾಷನಲ್ ಮೆರಿಟ್ ವಿದ್ಯಾರ್ಥಿವೇತನ ಇತ್ಯಾದಿಗಳಿಗೆ ಸಿದ್ಧತೆ ನಡೆಸುವ ಮಕ್ಕಳಿಗೆ ಪೂರಕವಾಗಬಲ್ಲ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಮುಂದೆ ಕಾಸರಗೋಡು ಶೈಕ್ಷಣಿಕ ಜಿಲ್ಲೆ ಬಹಳ ಹಿಂದುಳಿದಿದೆ. ಇದಕ್ಕೆ ಪೂರಕವಾಗಿರುವ ಡಯಟ್ ಯೋಜನೆಗಳನ್ನು ಮುಂದುವರಿಸಲಾಗುವುದು. ಪ್ರಾಥಮಿಕ ಪೂರ್ವ ಶಿಕ್ಷಕರಿಗೆ, ಆಯಾಗಳಿಗೆ ತರಬೇತಿ ನೀಡಲಾಗುವುದು. ಪರಿಶಿಷ್ಟ ಜಾತಿ-ಪಂಗಡದ ಪ್ರಮೋಟರ್‍ರಿಗೆ ಒರಿಯಂಟೇಷನ್ ಪೆÇ್ರೀಗ್ರಾಂ,   ಸಾಕ್ಷರತಾ ಕಾರ್ಯಕರ್ತರಿಗೆ ತರಬೇತಿ ಇತ್ಯಾದಿ ಜಾರಿ ವರ್ಷದಲ್ಲಿ ನಡೆಸಲಾಗುವುದು.
        ಪ್ರೀ ಸರ್ವೀಸ್, ಇನ್ ಸರ್ವೀಸ್ ವಲಯಗಳಲ್ಲಿ ವಿವಿಧ ತರಬೇತಿಗಳು, ಸಂಶೋಧನೆ ಚಟುವಟಿಕೆಗಳು, ಪಠ್ಯ ಸಾಮಾಗ್ರಿಗಳ ತಯಾರಿ, ಟ್ರೈ ಔಟ್ ನೂತನ ಚಟುವಟಿಕೆಗಳು, ಅಧ್ಯಯನಗಳು, ಸಂಯೋಜಿತ ಶಿಕ್ಷಣ, ಅತ್ಯುತ್ತಮ ಅಕಾಡೆಮಿಕ್ ಕಾರ್ಯಕ್ರಮಗಳ ದಾಖಲೀಕರಣ ಇತ್ಯಾದಿ ಅನೇಕ ಚಟುವಟಿಕೆಗಳಿಗೆ ಡಯಟ್ ರೂಪು ನೀಡಿದೆ. ಮುಖ್ಯಶಿಕ್ಷಕರಿಗೆ ನೂತನವಾಗಿ ಭಡ್ತಿ ಲಭಿಸಿದ ಪ್ರಾಥಿಮಿಕ, ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.
       ಈ ಸಂಬಂಧ ನಡೆದ ಸಲಹಾ ಸಮಿತಿ ಸಭೆಯನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್  ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಭಿನ್ ವಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಕ್ಷರತಾ ಮಿಷನ್ ಅಕಾಡೆಮಿಕ್ ವಿಭಾಗ ಸಂಚಾಲಕ ಕೆ.ವಿ.ರಾಘವನ್ ಅವರು `ಉತ್ತರಂ' ನ್ಯೂಸ್ ಲೆಟರ್ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾ ಅ„ಕಾರಿ ಮಧುಸೂದನನ್ ಎಂ. ಅವರಿಗೆ ನ್ಯೂಸ್ ಲೆಟರ್ ಹಸ್ತಾಂತರಿಸಲಾಯಿತು. ಮಾಜಿ ಪ್ರಾಂಶುಪಾಲ ಸಿ.ಎನ್.ಬಾಲಕೃಷ್ಣನ್, ಉಪನ್ಯಾಸಕ ವಿನೋದ್ ಕುಮಾರ್ ಪೆರುಂಬಳ ಮೊದಲಾದವರು ಉಪಸ್ಥಿತರಿದ್ದರು.   
        ಡಯಟ್ ಪ್ರಾಂಶುಪಾಲ ಡಾ.ಎಂ.ಬಾಲನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಉಪನ್ಯಾಸಕ ಡಾ.ಸುರೇಶ್ ಕೋಕ್ಕಾಡ್ ವರದಿ ವಾಚಿಸಿದರು. ಹಿರಿಯ ಉಪನ್ಯಾಸಕ ಕೆ.ರಾಮಚಂದ್ರನ್ ನಾಯರ್ ಜಾರಿ ವರ್ಷದ ಕಾರ್ಯಕ್ರಮಗಳ ಬಗ್ಗೆ ಸಲಹೆಗಳನ್ನು ಪ್ರಸ್ತುತಪಡಿಸಿದರು.
        ಕೊರಗ ಜನಾಂಗದ ಬಗ್ಗೆ ಅಧ್ಯಯನ : ಕೊರಗ ಜನಾಂಗದ ವಲಯದ ಕುರಿತು ಅಧ್ಯಯನ ನಡೆಸಲು ಡಯಟ್ ಸಂಸ್ಥೆ ನಿರ್ಧರಿಸಿದೆ. ಸ್ವಂತ ಭಾಷೆಯನ್ನೂ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿರುವ ಈ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳ ಶಿಕ್ಷಣ ವಲಯದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ. ಆದಿವಾಸಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸೆಕೆಂಡರಿ ಶಾಲಾ ಶಿಕ್ಷಣ ವಲಯದ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗುವುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries