ಕುಂಬಳೆ: "ಪೆನ್ ಫ್ರೆಂಡ್" ಯೋಜನೆ ಆರಿಕ್ಕಾಡಿ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡಿದೆ.
ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಸಿ ಅವುಗಳನ್ನು ಪುನರ್ ನಿರ್ಮಿಸುವ ಮೂಲಕ ತ್ಯಾಜ್ಯ ಕಡಿತಗೊಳಿಸುವ, ತ್ಯಾಜ್ಯ ವಿರುದ್ಧ ಜಾಗೃತಿಮೂಡಿಸುವ, ಒಂದು ಬಾರಿ ಮಾತ್ರ ಬಳಸಿ ಬಿಸುಟುವ ಪೆನ್ ಗಳ ವಿರುದ್ಧ ಜನತೆಗೆ ತಿಳಿಹೇಳುವ ಉದ್ದೇಶದಿಂದ ಹರಿತ ಕೇರಳಂಮಿಷನ್ ರಚಿಸಿದ ಯೋಜನೆ "ಪೆನ್ ಫ್ರೆಂಡ್" ಯೋಜನೆಯಾಗಿದ್ದು ಹೆಚ್ಚು ಜನಪ್ರೀಯತೆ ಗಳಿಸುತ್ತಿದೆ.
ಶಾಲೆಯಲ್ಲಿ ನಡೆದ ಸಮಾರಂಭವನ್ನು ಹರಿತ ಕೇರಳಂ ಯೋಜನೆಯ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಎಸ್.ಸಾವಿತ್ರಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕೃಷ್ಣಕುಮಾರ್ ಪಳ್ಳಿಯತ್ ಮೊದಲಾದವರು ಉಪಸ್ಥಿತರಿದ್ದರು.