HEALTH TIPS

ಗಾಳಿಯ ರಭಸಕ್ಕೆ ಹಾರಿಹೋದ ಮನೆಯ ಮಾಡು


       ಬದಿಯಡ್ಕ: ವಿಪರೀತ ಗಾಳಿ ಮಳೆಯಿಂದ ಬದಿಯಡ್ಕ ಸಮೀಪದ ಮೂಕಂಪಾರೆ ಆನಂದ ಎಂಬವರ ಮನೆಯ ಮಾಡು ಹಾರಿಹೋದ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 1.30ರ ವೇಳೆ ಬೀಸಿದ ಗಾಳಿಗೆ ಮಾಡಿಗೆ ಹೊದೆಸಿದ ಸಿಮೆಂಟ್ ಶೀಟ್ ಹಾರಿ ಮನೆಯ ಮತ್ತೊಂದು ಭಾಗಕ್ಕೆ ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಆನಂದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ಕೇವಲ 4 ಸೆಂಟ್ಸ್ ಸ್ಥಳ ಹೊಂದಿರುವ ಅವರು ಕೂಲಿಕಾರ್ಮಿಕರಾಗಿದ್ದಾರೆ. ಸುಮಾರು 50,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಕಳೆದ ವಾರ ಈ ಮನೆಯ ಸಮೀಪದ ಇನ್ನೊಂದು ಮನೆಯ ಮಾಡು ಇದೇ ರೀತಿ ಹಾನಿಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries