HEALTH TIPS

'ಎದೆ ಹಾಲುಣಿಸುವುದರಿಂದ ಸ್ತ್ರೀಯರ ಸೌಂದರ್ಯ ಕುಗ್ಗದು'-ಡಾ.ಸಪ್ನಾ ಜೆ ಉಕ್ಕಿನಡ್ಕ ಎಣ್ಮಕಜೆ ಪಂಚಾಯಿತಿ ಮಟ್ಟದ ವಿಶ್ವ ಎದೆ ಹಾಲುಣಿಸುವ ಸಪ್ತಾಹ ಕಾರ್ಯಕ್ರಮ


       ಪೆರ್ಲ:ತಾಯಂದಿರು ಎದೆಹಾಲು ಉಣಿಸುವುದರಿಂದ ಮಗುವಿಗೆ ಅಗತ್ಯದ ಪೌಷ್ಠಿಕಾಂಶಗಳು ಲಭಿಸುವುದು. ಹೆರಿಗೆಯಾದ ಮಹಿಳೆ ಸ್ರವಿಸುವ ತಿಳಿ ಹಳದಿ ಬಣ್ಣದ ಮೊಲೆ ಹಾಲಿನಲ್ಲಿ ಶಿಶುವನ್ನು ಸೋಂಕಿನಿಂದ ಸಂರಕ್ಷಿಸುವ ಕೊಲಸ್ಟ್ರಮ್ ಅಂಶ ಒಳಗೊಂಡಿರುವುದರಿಂದ ಮಗು ಹುಟ್ಟಿದ ತಕ್ಷಣ ಒಂದು ಗಂಟೆಯ ಒಳಗಡೆ ಎದೆ ಹಾಲು ಉಣಿಸಲೇಬೇಕು ಎಂದು ಉಕ್ಕಿನಡ್ಕಾಸ್ ಆಯುರ್ವೇದ ನಿರ್ದೇಶಕಿ ಡಾ.ಸಪ್ನಾ ಜೆ. ಉಕ್ಕಿನಡ್ಕ ತಿಳಿಸಿದರು.
     ಮಹಿಳಾ ಮತ್ತು ಶಿಶುಕಲ್ಯಾಣ ಇಲಾಖೆ ನಿರ್ದೇಶನದಂತೆ ಎಣ್ಮಕಜೆ ಪಂಚಾಯಿತಿ ಸಂಭಾಂಗಣದಲ್ಲಿ ನಡೆದ ಪಂಚಾಯಿತಿ ಮಟ್ಟದ ವಿಶ್ವ ಎದೆ ಹಾಲುಣಿಸುವ ಸಪ್ತಾಹ ಕಾರ್ಯಕ್ರಮದಲ್ಲಿ ತರಗತಿ ನೀಡಿ ಮಾತನಾಡಿದರು.
    ಮಗುವಿಗೆ ಎದೆ ಹಾಲುಣಿಸುವುದರ ಮಹತ್ವವನ್ನು ಜನರಿಗೆ ತಿಳಿಯ ಪಡಿಸುವುದಕ್ಕೋಸ್ಕರ ವಿಶ್ವಾದ್ಯಂದ ಆಗಸ್ಟ್ ಮೊದಲವಾರ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಮಗುವಿಗೆ 6 ತಿಂಗಳು ತುಂಬುವ ತನಕ ಎದೆಹಾಲು ಬಿಟ್ಟು ಬೇರೇನೂ ಕೊಡಬಾರದು.ಅದೇ ರೀತಿ ಎರಡು ವರ್ಷದ ವರೆಗೆ ಇತರ ಶಿಶು ಆಹಾರದೊಂದಿಗೆ ಎದೆಹಾಲುಣಿಸುವುದನ್ನು ಮುಂದುವರಿಸಬೇಕು.ಇದರಿಂದ ಮಗುವಿನ ಭೌತಿಕ ಬೆಳವಣಿಗೆ, ಸ್ಪರ್ಶ ಸುಖ ಅನುಭವದಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುವುದು. ಮಗುವಿಗೆ ಎದೆಹಾಲು ಕುಡಿಸಿದರೆ ಸೌಂದರ್ಯ ಹಾಳಾಗುವುದು ಎನ್ನುವುದು ಸೌಂದರ್ಯ ಪ್ರಜ್ಞೆ  ಕಾಡುವ ಸ್ತ್ರೀಯರ ತಪ್ಪು ಕಲ್ಪನೆ ಎಂದು ಅವರು ತಿಳಿಸಿದರು. ಅದೇ ರೀತಿ ತಿಳುವಳಿಕೆ ಹೊಂದಿದ ಉದ್ಯೋಗಸ್ಥ ಮಹಿಳೆಯರಲ್ಲಿ ಮಕ್ಕಳಿಗೆ ಎದೆ ಹಾಲುಣಿಸುವ ಪ್ರಮಾಣ ಕಡಿಮೆಯಾಗುತ್ತಿರುವುದು ದೌರ್ಭಾಗ್ಯಕರ.ಸಮೀಕ್ಷೆಗಳ ಪ್ರಕಾರ ಸ್ತನಪಾನ ವಂಚಿತ ಶಿಶುಗಳಲ್ಲಿ ಪೌಷ್ಟಿಕಾಂಶದ ಕೊರತೆ ಹಾಗೂ ಶ್ವಾಸಕೋಶದ ಮತ್ತು ಕರುಳಿನ ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.ಮೊಬೈಲ್ ಫೋನ್ ಉಪಯೋಗಿಸುತ್ತಾ, ಅಥವಾ ಟಿವಿ ಎದುರುಗಡೆ,  ಶಬ್ದವಾಗುವ ಪರಿಸರದಲ್ಲಿ ತಾಯಂದಿರು ಮಗುವಿಗೆ ಹಾಲುಣಿಸಬಾರದು ಎಮದು ತರಿಳುವಳಿಕೆ ನೀಡಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಹಾಲು ಅಮೃತಕ್ಕೆ ಸಮಾನ.ನವಜಾತ ಶಿಶುವಿಗೆ ತಾಯಿ ಹಾಲು ಬಹು ಮುಖ್ಯ.ಮಗುವಿಗೆ ನೀಡುವ ಇತರ ಯಾವುದೇ ಪೌಷ್ಟಿಕ ಆಹಾರ ಎದೆ ಹಾಲಿಗೆ ಸಮವಾಗದು.ಮಗುವಿನ ಬೆಳವಣಿಗೆ ಹಾಗೂ ಪೌಷ್ಟಿಕತೆಗೆ ತಾಯಿ ಹಾಲು ಸಹಕಾರಿ ಎಂದರು.
      ಪಂಚಾಯಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್, ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜೆ.ಪಿ.ಎಚ್.ಎನ್. ಶ್ರೀಜಾ ಶುಭ ಹಾರೈಸಿದರು. ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಅಂಗನವಾಡಿ ಶಿಕ್ಷಕಿಯರು ತಯಾರಿಸಿದ ಸ್ತನ್ಯಪಾನದ ನಾನಾ ಹಂತಗಳ ಮಹತ್ವವನ್ನು ತಿಳಿಸುವ ಚಾರ್ಟ್ ಪ್ರದರ್ಶಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಸುಲೋಚನ ಸ್ವಾಗತಿಸಿದರು.ಉಕ್ಕಿನಡ್ಕ ಅಂಗನವಾಡಿಯ ಶಿಕ್ಷಕಿ ಭವಾನಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries