HEALTH TIPS

ಜಾನಪದ ಪರಿಷತ್ತು ಪದಗ್ರಹಣ ಹಾಗೂ ಕಲಾವಿದರಿಗೆ ಉಚಿತ ಕಿಟ್ ವಿತರಣೆ-ಜಾನಪದ ಕಲೆಗಳ ಮೂಲಕ ಪರಸ್ಪರ ಬಾಂಧವ್ಯ ಬೆಸೆಯಲು ಕಾರಣ: ಟಿ.ತಿಮ್ಮೇ ಗೌಡ

           
      ಕಾಸರಗೋಡು : ವಿಶೇಷ ಸ್ಧಾನಮಾನ ಪಡೆದಿರುವ ಕಾಸರಗೋಡು ಗಡಿನಾಡು ವೈವಿಧ್ಯಮಯ ಜಾನಪದ ಕಲೆಗಳಿಂದ,ವಿವಿಧ ಭಾಷೆ  ಸಂಸ್ಕøತಿಯ ಹಿನ್ನೆಲೆಯಲ್ಲಿ ಸಂಪನ್ನವಾದ ಪ್ರದೇಶವಾಗಿದೆ. ವಿವಿಧ ಜಾನಪದ ಕಲೆಗಳ ಮೂಲಕ ಪರಸ್ಪರ ಬಾಂಧವ್ಯ ಬೆಸೆಯಲು ಕಾರಣವಾಗಿದೆ. ಈ ಕಾರಣದಿಂದಲೇ ಕಾಸರಗೋಡು ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಟಿ.ತಿಮ್ಮೇ ಗೌಡ ಅವರು ಹೇಳಿದರು.
      ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಕೇರಳ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಲಾವಿದರಿಗೆ ಉಚಿತ ಕಿಟ್ ವಿತರಣೆ ಕಾರ್ಯಕ್ರಮವನ್ನು  ಶನಿವಾರ  ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಹೊಟೇಲ್ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜಾನಪದ ವಾದ್ಯ ದುಡಿ ಬಾರಿಸುವ ಮೂಲಕ ಉದ್ಘಾಟಸಿ ಅವರು ಮಾತನಾಡಿದರು.
      ಕರ್ನಾಟಕದ ಅಕಾಡೆಮಿಗಳಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.
       ಜಾನಪದ ಪರಿಷತ್ತು ಕೇರಳ ಘಟಕ ಕಾಸರಗೋಡಿನಲ್ಲಿ  ಕಳೆದ ಏಳು ವರ್ಷಗಳಿಂದ ಉತ್ತಮ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಎಲ್ಲಾ ಕ್ಷೇತ್ರಗಳಲ್ಲಿನ ಕಲಾವಿದರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯ ನಡೆಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.
    ಬಡ ಅವಿದ್ಯಾವಂತ ವಯಸ್ಕರಿಗೆ ಮಾಸಾಸನ ಭರಿಸುವಂತೆ ಮಾಡಲು, ಅವರಿಗೆ ಅದಕ್ಕಿರುವ ಅರ್ಜಿ ಫಾರಂಗಳನ್ನು ಭರ್ತಿಗೊಳಿಸಲು ಯಾವುದೂ ತಿಳಿದಿರುವುದಿಲ್ಲ. ಅಂತಹ ಅವಿದ್ಯಾವಂತರನ್ನು ಗುರುತಿಸಿ ಅವರಿಗೆ  ಮಾಸಾಸನ ಲಭಿಸುವಂತೆ ಮಾಡುವಲ್ಲಿ ಜಾನಪದ ಪರಿಷತ್ತು ಸಂಘಾಟಕರು ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕಾಗಿದೆ ಅಂತಹ ಕಾರ್ಯವೆಸಗುವಲ್ಲಿ ಸುಬ್ಬಯ್ಯಕಟ್ಟೆ  ತಂಡ ಉತ್ತಮ ತಂಡವಾಗಿ ಬೆಳೆದಿದೆ ಎಂದು ಅವರು ಹೇಳಿದರು. 
      ಕಾರ್ಯಕ್ರಮದಲ್ಲಿ ಕ.ಜಾ.ಪ. ಕೇರಳ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉಪಸ್ಥಿತರಿದ್ದು ಮಾತನಾಡಿ, ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ, ಸಾಮಾಜಿಕ ಬಹುಭಾಷಾ ವಿವಿಧತೆಯ ವರ್ತಮಾನದ ಸಾಕಾರತೆಗೆ ಪುಷ್ಠಿ ನೀಡುವ ಜಾನಪದೀಯ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತಗೊಳ್ಳಬೇಕು. ಹೊಸ ತಲೆಮಾರಿಗೆ ಪರಂಪರೆಯ ವಾಸನೆಯನ್ನು ಗ್ರಹಿಸುವ, ಅದರೊಂದಿಗೆ ಹೆಜ್ಜೆ ಹಾಕುವ ಅವಕಾಶಗಳಿಗೆ ತೆರೆದುಕೊಂಡಷ್ಟು ಸಾಮರಸ್ಯ, ಸಮೃದ್ದ ಸಮಾಜ ನಿರ್ಮಾಣಕ್ಕೆ ರಹದಾರಿಯಾಗುತ್ತದೆ.ಇನ್ನಷ್ಟು ಚಟುವಟಿಕೆಗಳು ನಡೆಯುತ್ತಿರಲಿ ಎಂದು ಹಾರೈಸಿದರು.
       ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಹಿರಿಯ ಬಹುಭಾಷಾ ಕವಿ, ಸಾಹಿತಿ ಮುಹಮ್ಮದ್ ಬಡ್ಡೂರು, ಕ.ಜಾ.ಪ. ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಹಿರಿಯ ಪತ್ರಕರ್ತ ದಯಾಸಾಗರ ಚೌಟ ಮುಂಬೈ, ಗಡಿನಾಡು ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಹಿರಿಯ ಸಾಹಿತಿ ಮಲಾರ್ ಜಯರಾಮ ರೈ, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಯಕ್ಷದ್ರುವ ಪಟ್ಲಫೌಂಡೇಶನ್ ಕುಂಬಳೆ  ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.
    ಕಾರ್ಯಕ್ರಮದಲ್ಲಿ 26 ಮಂದಿ ವಿವಿಧ ಜಾನಪದ ಕಲಾವಿದರನ್ನು ಸಮ್ಮಾನಿಸಿ ಉಚಿತ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗಡಿನಾಡ ಬ್ಯಾರಿ ಜಾನಪದದ ವಿಶಿಷ್ಟ ಪ್ರಕಾರವಾದ ಕೈಕೊಟ್ಟು ಪಾಟ್ ಹಾಗೂ ಕುತ್ತಿಕೋಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಸಿದ್ದವಾಗಿರುವ ಅಪೂರ್ವ ಜಾನಪದ ಪ್ರಕಾರವಾದ ಮಂಗಲಂಕಳಿ ನೃತ್ಯಗಳ ಪ್ರದರ್ಶನ, ಜಾನಪದ ಕುಣಿತ ಜನಾಕರ್ಷಣೆಯನ್ನುಂಟು ಮಾಡಿತು.
     ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಕ.ಜಾ.ಪ. ಕೇರಳ ಘಟಕ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್.ಕೆ. ಪೈವಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಗೌರವ ಸಲಹೆಗಾರ ಪ್ರೊ.ಎ.ಶ್ರೀನಾಥ್ ವಂದಿಸಿದರು. ಕೋಶಾಧಿಕಾರಿ  ರವಿ ನಾಯ್ಕಾಪು ಮತ್ತು ಶ್ರೀಕಾಂತ್ ನೆಟ್ಟಣಿಗೆ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಪರಿಷತ್ತು ಗಡಿನಾಡ ಘಟಕದ ಗೌರವ ಸಲಹೆಗಾರರಾದ ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಜಯಪ್ರಕಾಶ ಪಜಿಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪಾಧ್ಯಕ್ಷರಾದ ಸಂಧ್ಯಾಗೀತಾ ಬಾಯಾರು, ಈಶ್ವರ ನಾಯ್ಕ್ ಪೆರ್ಮುಂಡ, ಜೊತೆ ಕಾರ್ಯದರ್ಶಿಗಳಾದ ಝಡ್.ಎ.ಕಯ್ಯಾರ್, ಸದಸ್ಯರಾದ ಅಖಿಲೇಶ್ ನಗುಮುಗಂ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಜಯಾನಂದಕುಮಾರ್ ಹೊಸದುರ್ಗ, ಜಯರಾಮ ಪಾಟಾಳಿ ಪಡುಮಲೆ, ಪುಷ್ಪಾವತಿ ನೆಟ್ಟಣಿಗೆಗುತ್ತು, ಜಯಂತಿ ಕೃಷ್ಣಪ್ಪ ಅಡೂರು, ಸರಿತಾ ಶಿವನ್ ಮಲ್ಲ, ಮೊಹಮ್ಮದಾಲಿ ಪೆರ್ಲ, ರಾಜು ಸ್ಟೀಪನ್ ಡಿಸೋಜ, ಶಿವರಾಜ್ ಬಜಕ್ಕೂಡ್ಲು, ಹಸೈನಾರ್ ನುಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.  ಪೆÇ.ಎ.ಶ್ರೀನಾಥ್ ಕಾಸರಗೋಡು ವಂದಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries