ಕಾಸರಗೋಡು: ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್ ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಎಲ್.ಡಿ. ಟೈಪಿಸ್ಟ್, ಆಫೀಸ್ ಅಡೆಂಡೆಂಟ್, ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್), ಇನ್ಸ್‍ಪೆಕ್ಟರ್, ಕ್ಲರ್ಕ್ ಟೈಪಿಸ್ಟ್ ಮುಂತಾದ ಅನೇಕ ಹುದ್ದೆಗಳಿಗೆ ಏಕ ಸಮಯ ದಾಖಲಾತಿ (ಒನ್ ಟೈಮ್ ರಿಜಿಸ್ಟ್ರೇಶನ್) ಮೂಲಕ ಅರ್ಜಿ ಆಹ್ವಾನಿಸಿದೆ.
ಮಾತ್ರವಲ್ಲದೇ ಹತ್ತನೇ ತರಗತಿ ತೇರ್ಗಡೆಯಾದ ಕನ್ನಡ ಉದ್ಯೋಗಾರ್ಥಿಗಳಿಗೆ ಕೇರಳ ರಾಜ್ಯ ಕಾರ್ಯದರ್ಶಿ ಭವನ, ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್ ಜಿಲ್ಲಾ ಕಚೇರಿಗಳಲ್ಲಿ, ಲೋಕಲ್ ಫಂಡ್ ಆಡಿಟ್ ಕಚೇರಿಗಳಲ್ಲಿರುವ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ವಿಪುಲ ಅವಕಾಶವಿದೆ. ಕೇಟಗರಿ ನಂ.089/2019 ಪ್ರಕಾರ 64 ಹುದ್ದೆಗಳಿದ್ದು ಆಗಸ್ಟ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
18 ರಿಂದ 36 ವರ್ಷ ಮೀರದವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒ.ಬಿ.ಸಿ. ವಿಭಾಗದವರಿಗೆ 5 ಮತ್ತು 3 ವರ್ಷ ರಿಯಾಯಿತಿ ಇದೆ. ವಿಧವೆಯರಿಗೂ ವಯೋಮಿತಿಯಲ್ಲಿ ರಿಯಾಯಿತಿ ಇದೆ. ಹೆಚ್ಚಿನ ವಿವರಗಳನ್ನು ಡಿಡಿಡಿ.hಛ್ಟಿZ್ಝZ.mo್ಚ.ಜಟqಠಿ.ಜ್ಞಿ ಅಂತರ್ಜಾಲದಿಂದ ಪಡೆಯಬಹುದು.
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿ ಕೊಳ್ಳಲು ಪ್ರಯತ್ನಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.