ಉಪ್ಪಳ: ಕಾಸರಗೋಡು ತಾಲೂಕು ಕುಲಾಲ ಸಂಘ ಮಂಜೇಶ್ವರ ಇದರ ಪೈವಳಿಕೆ ಶಾಖೆಯ 17ನೇ ಮಹಾಸಭೆಯು ಇತ್ತೀಚೆಗೆ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಪೂವಪ್ಪ ಮುನ್ನಿಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕುಲಾಲ ಸಮಾಜದ ಅಧ್ಯಕ್ಷ ಈಶ್ವರ ಮೂಲ್ಯ, ಬೆಂಗಳೂರಿನ ಉದ್ಯಮಿ ಉಮೇಶ ಇಡಿಯಾಲ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ್, ಸಾಹಿತಿ ಚಿದಂಬರ ಬೈಕಂಪಾಡಿ ಉಪಸ್ಥಿತರಿದ್ದರು.
ಕಾಸಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮಣಿಪ್ಪಾಡಿ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರ ಮೊದಲಾದವರು ಸೂಕ್ತ ಮಾರ್ಗದರ್ಶನ ನೀಡಿದರು.
ಹರೀಶ್ ಬೊಟ್ಟಾರಿ, ಗಣೇಶ್ ಪೆರುವೋಡಿ, ಶೀನ ಮಾಸ್ತರ್ ಕೋರಿಕ್ಕಾರ್, ರಾಮ ಮೂಲ್ಯ, ಅಂಗಡಿಮಾರು ಘಟಕದ ಅಧ್ಯಕ್ಷೆ ಪುಷ್ಪಾ ಭಾಗವಹಿಸಿದರು. ಯಶವಂತ ದಳಿಕುಕ್ಕು ಸ್ವಾಗತಿಸಿ, ಉದಯ ತೆಂಕಮಜಲು ವರದಿ ವಾಚಿಸಿದರು. ಅಶೋಕ ಕೋರಿಕ್ಕಾರು ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಕುಲಾಲ ಸಂಘದ ಗೌರವಾಧ್ಯಕ್ಷ ಗೋಪಾಲ ಮಾಸ್ತರ್ ಕುರುಡಪದವು ಹಾಗೂ ಯಕ್ಷಗಾನ ಕಲಾವಿದರಾದ ನಾರಾಯಣ ಗೋಳಿಮೂಲೆ ಅವರನ್ನು ಸಮ್ಮಾನಿಸಲಾಯಿತು
2018-19ನೇ ವರ್ಷದಲ್ಲಿ ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಮತ್ತು ಮತ್ತು ಪ್ಲಸ್ ಟು ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮುದಾಯದ ತಲಾ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಒಂದನೇ ತರಗತಿಯಿಂದ ಪ್ಲಸ್ ಟು ಕಲಿಯುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಲಾಯಿತು. ಸದಾನಂದ ಅಮ್ಮೇರಿ ಮತ್ತು ಸಂಧ್ಯಾ ಚಿಪ್ಪಾರು ಕಾರ್ಯಕ್ರಮ ನಿರ್ವಹಿಸಿದರು. ಅಶೋಕ ಕೋರಿಕ್ಕಾರು ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಮಾಜ ಮಂದಿರದಲ್ಲಿ ಸಮುದಾಯದ ಮಕ್ಕಳಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತು `ಶಾಂಭವಿ ವಿಜಯ' ಯಕ್ಷಗಾನ ನಡೆಯಿತು.
ನಂತರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪೂವಪ್ಪ ಪೂಜಾರಿ ಮುನ್ನಿಪಾಡಿ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾುತು. ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಾಯ ಸಾಯ, ಕಾರ್ಯದರ್ಶಿಯಾಗಿ ಅಶೋಕ ಕೋರಿಕ್ಕಾರು ಹಾಗೂ ಪ್ರಸಾದ ಪೊನ್ನಂಗಳ, ಕೋಶಾಧಿಕಾರಿಯಾಗಿ ಜಯಂತ ಚಿಪ್ಪಾರು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ ಕೊಡಂದೂರು, ಯಶವಂತ ದಳಿಕುಕ್ಕು, ಸದಾನಂದ ಅಮ್ಮೇರಿ ಶ್ರೀಧರ ಬಾಯಾರು, ಗೌರವ ಸಲಹೆಗಾರರಾಗಿ ಹರೀಶ ಬೊಟ್ಟಾರಿ, ಶೀನ ಮಾಸ್ತರ್ ಕೋರಿಕ್ಕಾರು, ರಾಮ ಮೂಲ್ಯ ಅಂಗಡಿಮಾರು, ಐತಪ್ಪ ಮಾಸ್ತರ್ ಬಂಗಳೆ, ಉಪಾಧ್ಯಕ್ಷರಾಗಿ ಬಾಬು ಮೂಲ್ಯ ವಾದ್ಯಪಡ್ಪು, ನಾರಾಯಣ ಗೋಳಿಮೂಳೆ ಹಾಗೂ ಇಪ್ಪತ್ತು ಮಂದಿಯ ಕಾರ್ಯಾಕಾರಿ ಸಮಿತಿಯನ್ನು ರಚಿಸಲಾಯಿತು. ಯುವ ವೇದಿಕೆಯ ಅಧ್ಯಕ್ಷರಾಗಿ ಉದಯ ತೆಂಕಮಜಲು ಅವರನ್ನು ಆಯ್ಕೆ ಮಾಡಲಾಯಿತು.