ನವದೆಹಲಿ: ಪಾರ್ಸೆಲ್ ಮಾಡಿರುವ ಆಹಾರವನ್ನು ತಂದು ಕೊಡುವುದು ಡೆಲಿವರಿ ಬಾಯ್ ಕೆಲಸ. ಆದರೆ ಇಲ್ಲೊಬ್ಬ ಗ್ರಾಹಕ ಹಿಂದುಯೇತರ ವ್ಯಕ್ತಿ ಡೆಲಿವರಿ ಮಾಡಲು ಬಂದಿದ್ದ ಅಂತ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಆರ್ಡರ್ ಮಾಡಿ ನಂತರ ಕ್ಯಾನ್ಸಲ್ ಮಾಡಿರುವ ಅಮಿತ್ ಶುಕ್ಲಾ ಎಂಬಾತ ತನ್ನ ಟ್ವೀಟರ್ ನಲ್ಲಿ ನಾನು ಜೋಮ್ಯಾಟೋ ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗಿತ್ತು. ನಾನು ಡೆಲಿವರಿ ಬಾಯ್ ನನ್ನ ಬದಲಿಸುವ ಎಂತ ಕೇಳಿದ್ದಕ್ಕೆ ಸಂಸ್ಥೆಯವರು ಆಗಲ್ಲ ಎಂದಿದ್ದಾರೆ ಎಂದು ಬರೆದುಕೊಂಡಿದ್ದರು.
Tweets
- Pinned TweetTweepals please share and RT and watch this small 10 min video our NGO has produced on Maa Narmada on Narmada Seva Yatra
- पं अमित शुक्ल RetweetedLet me make my point very clear. I’m not going to delete @ZomatoIN @UberEats_IND @swiggy_in app. But will definitely cancel my order if d delivery boy is a Topiwalla Mulla. U can call me communal / Bigot. I don’t care. I won’t take ride in @Uber if the driver is a Mulla. Period.
- ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಂಸ್ಥೆಯವರು ಹಣ ರಿಫಂಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ನಿಮ್ಮ ರಿಫಂಡ್ ಸಹ ಬೇಕಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವೀಟರ್ ನಲ್ಲಿ ಜೋಮ್ಯಾಟೋಗೆ ಟ್ಯಾಗ್ ಮಾಡಿದ್ದರು.ಇದಕ್ಕೆ ಜೋಮ್ಯಾಟೋ ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಗ್ರಾಹಕನಿಗೆ ಖಡಕ್ ತಿರುಗೇಟು ನೀಡಿದೆ.ಇದಕ್ಕೆ ಜೋಮ್ಯಾಟೋ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ನರ್‍ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯ ದುಃಖ ಆಗಲಾರದು ಎಂದು ಬರೆದು ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿದ್ದಾರೆ.