ಕಾಸರಗೋಡು: ರಾಮಾಯಣ ಮಾಸಾಚರಣೆಯಂಗವಾಗಿ ವಿದ್ಯಾನಗರದ ಚಿನ್ಮಯ ಮಿಶನ್ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ರಾಮನಾಮ ಪಾರಾಯಣ ಜರಗಿತು.
ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸವಿತಾ ಟೀಚರ್ ರಾಮಾಯಣದ ಮಹತ್ವವನ್ನು ವಿವರಿಸಿದರು. ಬಾಲಚಂದ್ರನ್, ಶ್ರೀಕುಮಾರ್, ದೀಪಾ, ಚನಿಯಪ್ಪ ನಾೈಕ್, ಪದ್ಮಿನಿ ಟೀಚರ್, ಪುಷ್ಪಲತಾ ಟೀಚರ್, ರಾಜನ್, ಗಣೇಶ್ ಪ್ರಭು ಮೊದಲಾದವರು ಭಾಗವಹಿಸಿದರು. ವಿದ್ಯಾನಗರದ ಚಿನ್ಮಯ ಮಿಶನ್ ಆಶ್ರಯದಲ್ಲಿ ಹಲವಾರು ವರ್ಷಗಳಿಂದ ಕರ್ಕಟಕ ಮಾಸದಲ್ಲಿ ಮನೆ, ಮಂದಿರ, ಇನ್ನಿತರ ಆರಾಧನಾ ಕೇಂದ್ರಗಳಲ್ಲಿ ರಾಮಾಯಣ ಪಾರಾಯಣ ನಡೆದು ಬರುತ್ತಿದೆ.