ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಮೃತಂ ಆಷಾಡ ಮಾಸದ ಔಷಧ ಗಂಜಿ ಮೇಧಿಂದಿನಿಂದ ಆರಂಭಗೊಳ್ಳಲಿದೆ.
ಔಷಧೀಯ ಅಂಶಗಳಿಂದ ಕೂಡಿದ 8 ವಿಧದ ಗಂಜಿ ಮೇಳ ಇಂದಿನಿಂದ ಆ.13 ವರೆಗೆ ಈ ಮೇಳದಲ್ಲಿ ವಿತರಣೆ ನಡೆಯಲಿದೆ. ವಿವಿಧ ರೀತಿಯ ಜೀವನ ಶೈಲಿ ಕಾಯಿಲೆಗಳಿಂದ ಯುವಜನತೆ ಬಳಲುತ್ತಿರುವ ಇಂದಿನ ದಿನಗಳಲ್ಲಿ ಮತ್ತು ಬದುಕಿನ ಶೈಲಿ ಬದಲುತ್ತಿರುವ ಇಂದಿನ ಯುಗದಲ್ಲಿ ಆಷಾಡ ಔಷಧೀಯ ಗಂಜಿ ಪ್ರಾಕೃತಿಕ ದಿವ್ಯ ಔಷಧವಾಗಿದೆ.
ಒಬ್ಬರು ಸತತವಾಗಿ 7 ದಿನಗಳ ಕಾಲ ಸೇವಿಸ ಬೇಕಾದ 7 ವಿಧದ ಗಂಜಿಗಳನ್ನು ಮೇಳದಲ್ಲಿ ವಿತರಿಸಲಾಗುತ್ತದೆ. ತರಿಯಕ್ಕಿ ಗಂಜಿ, ಔಷಧ ಗಂಜಿ, ಜೀರಿಗೆ ಗಂಜಿ, ಹಾಲುಗಂಜಿ, ಗೋ ಗಂಜಿ, ನೆಲ್ಲಿಕಾಯಿ ಗಂಜಿ ಇತ್ಯಾದಿಗಳಲ್ಲದೆ ನೆಲ್ಲಿಕಾಯಿ ಚಣ್ನಿ, ಆಷಾಡ ಔಷಧಗಳು, ವಿವಿಧ ಸೂಪ್‍ಗಳು, ವಿವಿಧ ರೀತಿಯ ಕಡುಬುಗಳು, ಪುಟ್ಟುಗಳು ಇತ್ಯಾದಿಯೂ ಮೇಳದಲ್ಲಿರುವುವು. ಕುಟುಂಬಶ್ರೀಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿರುವುವು. ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು.