ಕಾಸರಗೋಡು: ವಿಶ್ವ ಎದೆಹಾಲುಣಿಸುವ ಸಪ್ತಾಹ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಜಿಲ್ಲಾ ಐ.ಸಿ.ಡಿಎಸ್. ಪ್ರೋಗ್ರಾಂ ಆಫೀಸ್ ನೇತೃತ್ವದಲ್ಲಿ ಸಪ್ತಾಹ ನಡೆಯುತ್ತಿದೆ. ಇದರ ಅಂಗವಾಗಿ ಸಹಿ ಅಭಿಯಾನಜರುಗಿತು. ಹೆತ್ತವರನ್ನು ಜಾಗೃತಿ ಗೊಳಿಸುವ ಮತ್ತು ಎದೆಹಾಲುಣಿಸುವಿಕೆಯನ್ನು ಪ್ರೋತ್ಸಾಹಿಸುವ ಸಂದೇಶದೊಂದಿಗೆ ಈ ಅಭಿಯಾನ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಚಾಲನೆ ನೀಡಿದರು. ಐ.ಸಿ.ಡಿಎಸ್. ಪ್ರೋಗ್ರಾಂ ಆಫೀಸರ್ ಕವಿತಾ ರಾಣಿ ರಂಜಿತ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಜು ಪಿ. ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಾರಂಭ ಅಂಗವಾಗಿ ವಿಚಾರಸಂಖಿರಣ ಮತ್ತು ಜನಜಾಗೃತಿ ಕಾರ್ಯಕ್ರಮ ಕಾ?ಂಗಾಡ್ ಮೀನಾಪೀಸ್ ಪುರಭವನದಲ್ಲಿ ಇಂದು(ಆ.2) ನಡೆಯಲಿದೆ. ಜಿಲ್ಲಾ ಐ.ಸಿ.ಡಿಎಸ್. ಪ್ರೋಗ್ರಾಂ ಆಫೀಸ್, ಆರೋಗ್ಯ ಇಲಾಖೆ, ಇಂಡಿಯನ್ ಅಸೋಸಿಯೇಶನ್ ಆಫ್ ಪೀಡಿಯಾಟ್ರಿಕ್ಸ್ ಜಂಟಿ ವತಿಯಿಂದ ಜರುಗಲಿದೆ.
ಕಾ ಞÂ ಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಸಪ್ತಾಹದ ಸಂದೇಶ ಸಾರುವರು.