ಮಂಜೇಶ್ವರ: ನೆರೆ ಪೀಡಿತ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಾಡಿ ಗ್ರಾಮ ಪಂಚಾಯತಿಗೊಳಪಟ್ಟ ಕೊಲ್ಲಿ, ಬೊಳ್ಳಾಜೆಯ ನೇತ್ರಾವತಿ ನದಿ ತೀರ ಪ್ರದೇಶದಲ್ಲಿ ವಾಸಿಸುತ್ತಿರುವ ನೆರೆ ಸಂತ್ರಸ್ತರಿಗೆ ಮಂಜೇಶ್ವರದ ಶ್ರೀ ಕಟೀಲೇಶ್ವರೀ ಚಾರಿಟೇಬಲ್ ಟ್ರಸ್ಟ್ ದಾನಿಗಳಿಂದ ಸಂಗ್ರಹಿಸಿದ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು ಬೆಳ್ತಂಗಡಿಗೆ ತೆರಳಿ ಸಂತ್ರಸ್ತರಿಗೆ ನೀಡಿ ಸಂತೈಸಲಾಯಿತು.
ಟ್ರಸ್ಟ್‍ನ ಗೌರವಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಸದಸ್ಯರಾದ ಅನಿಲ್ ಕುಮಾರ್ ಕೊಡ್ಲಮೊಗರು, ಸಂತೋಷ್ ಪಲ್ಲೆದಪಡ್ಪು, ಅಬ್ಬಕ್ಕ ವಾಹಿನಿಯ ಶಶಿಧರ್ ಪೆÇಯ್ಯತ್ತಬೈಲ್ ಮೊದಲಾದವರು ಸಂತ್ರಸ್ತರಿಗೆ ಆಹಾರ ವಸ್ತುಗಳನ್ನು, ಹೊದಿಕೆ ವಸ್ತ್ರಗಳನ್ನು ನೀಡಿದ ನಿಯೋಗದಲ್ಲಿದ್ದರು. ಈ ವೇಳೆ ಗ್ರಾಮಸ್ಥರಾದ ಗುರುರಾಜ್ ಕಿಲ್ಲೂರು, ವಿಜಯ ಗೌಡ, ಹೊನ್ನಮ್ಮ, ವೀರಮ್ಮ ಸಹಿತ ಸುಮಾರು 100 ಕ್ಕೂ ಅ„ಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮಕ್ಕೆ ತೆರಳುವ ಮೊದಲು ಗ್ರಾಮ ದೇವರಾದ ಕೊಲ್ಯಶ್ರೀ ದುರ್ಗಾ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ನೇತ್ರಾವತಿ ನದಿ ತುಂಬಿ ಹರಿದು ತೀರ ಪ್ರದೇಶವಾದ ಕಿಲ್ಲೂರು, ಬೊಲ್ಲಾಜೆ ಪ್ರದೇಶದ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತವಾಗಿತ್ತು. ಇಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗಷ್ಟೇ ಹರಿಯುವ ಹೊಳೆಯ ನೀರು ಕಡಿಮೆಯಾಗಿದ್ದು, ನದಿ ತೀರ ಪರಿಸರದ ಮನೆಗಳ ಕೆಲಸ ಕಾರ್ಯಗಳು ಮತ್ತೆ ಪ್ರಾರಂಭಗೊಂಡಿದೆ. ಒಟ್ಟು 60 ಮನೆಗಳು ಶ್ರೀ ಪರಿಸರದಲ್ಲಿದ್ದು, ಇವರೆಲ್ಲರನ್ನು ಒಟ್ಟುಗೂಡಿಸಿ, ಗ್ರಾಮ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ 72 ಕುಟುಂಬಗಳಿಗೆ ಆಹಾರದ ನಿತ್ಯೋಪಯೋಗಿ ವಸ್ತುಗಳನ್ನು, ಹೊದಿಕೆ ವಸ್ತ್ರಗಳನ್ನು ಸರಿ ಪ್ರಮಾಣದಲ್ಲಿ ಚಾರಿಟೇಬಲ್ ಟ್ರಸ್ಟ್‍ನ ಸಾಮಾಜಿಕ ಕಾರ್ಯವನ್ನು ಊರ ಜನತೆ ಪ್ರಶಂಸಿಸಿದರು.