ಕಾಸರಗೋಡು: ಮುಂದಿನ 24 ತಾಸುಗಳಲ್ಲಿ ರಾಜ್ಯದ ಕಡಲ ಕಿನಾರೆಯ ದಕ್ಷಿಣ,ಪಶ್ಚಿಮ ದಿಶೆಯಲ್ಲಿ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯದ್ದು, ಕೇರಳ ಮತ್ತು ಲಕ್ಷದ್ವೀಪದ ಮೀನುಗಾರರು ಕಡಲಿಗೆ ತೆರಳಬಾರದು ಎಂದು ಹವಾಮಾನ ನಿಗಾ ಕೇಂದ್ರ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಲಭಿಸಿದ್ದು 1888.489 ಮಿಮೀ ಮಳೆ
ಮಳೆಗಾಲ ಆರಂಭಗೊಂಡು ಈ ವರೆಗೆ ಜಿಲ್ಲೆಯಲ್ಲಿ 1888.489 ಮಿಮೀ ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ 42.66 ಮಿಮೀ ಮಳೆ ಸುರಿದಿದೆ. 345.526 ಹೆಕ್ಟೇರ್ ಕೃಷಿ ಜಾಗ ಹಾನಿಗೊಂಡಿದೆ. 11 ಮನೆಗಳು ಪೂರ್ಣ ರೂಪದಲ್ಲಿ, 176ಮನೆಗಳು ಭಾಗಶಃ ನಾಶಗೊಂಡಿವೆ.
ಕಡಲ್ಕೊರೆತ ತೀವ್ರ&ಮೂರು ಮನೆಗಳು ಭೀತಿಯಲ್ಲಿ:
ಉಪ್ಪಳದ ಮುಸೋಡಿ,ಮಣಿಮುಂಡ, ಹನುಮಾನ್ ನಗರಗಳಲ್ಲಿ ತೀವ್ರ ಕಡಲ್ಕೊರೆತ ಭೀತಿ ಸೃಷ್ಟಿಸಿದೆ. 4 ರಿಂದ 5 ಫೀಟ್ ಎತ್ರಕ್ಕೆ ಚಿಮ್ಮುವ ಹೆದ್ದರೆಗಳು ಕೆಲವೊಮ್ಮೆ ಕಂಡುಬರುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಮಣಿಮುಂಡದ ಸೀತಮ್ಮ, ಕೇಶವ, ಲಕ್ಷ್ಮೀ ಎಂಬವರ ಮನೆಗಳು ಶೇ.90 ರಷ್ಟು ಸಾಗರ ಗರ್ಭ ಸೇರುವ ಆತಂಕದಲ್ಲಿದೆ. ಇಲ್ಲಿಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಸ್ತೆಗಳೂ ಸಂಪೂರ್ಣ ನಾಶಗೊಂಡಿದೆ.