ಕುಂಬಳೆ: ಅಂಬಿಲಡ್ಕದ ನವಸೇವಾ ವೃಂದದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿದ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ಸಂಜೆ ಸಮಾರೋಪ ಸಮಾರಂಭ ಸಂಘದ ಅಧ್ಯಕ್ಷ ಕೃಷ್ಣ ಎ.ಕಡೆಂಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಚಂದ್ರಹಾಸ ಪಿ.ಮಂಗಳೂರು ಮಾತನಾಡಿ ಸಂಸ್ಕøತಿ-ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಆಚರಣೆ-ನಂಬಿಕೆಗಳನ್ನು ಪಾಲಿಸುವ ಅಗತ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ಈ ಸಂದರ್ಭ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಎಚ್.ಪದ್ಮನಾಭ ಶೆಟ್ಟಿ ಮಡ್ವ ಬಹುಮಾನಗಳನ್ನು ವಿತರಿಸಿದರು. ಬಾಲಗೋಕುಲದ ಪುಟಾಣಿಗಳಿಂದ ಶ್ರೀಕೃಷ್ಣ ವೇಷದ ಶೋಭಾಯಾತ್ರೆ ನಡೆಯಿತು.