ಕಾಸರಗೋಡು: ಸರಕಾರಿ ಸಿಬ್ಬಂದಿಗೆ, ಶಿಕ್ಷಕರಿಗೆ ವೇತನ ವಿತರಣೆ ನಡೆಸುವ ನಿಟ್ಟಿನಲ್ಲಿ ನೂತನವಾಗಿ ಆರಂಭಿಸಿರುವ ಎಂಪ್ಲಾಯಿಸ್ ಟ್ರಷರಿ ಸೇವಿಂಗ್ಸ್ ಬ್ಯಾಂಕ್ (ಇ.ಟಿ.ಎಸ್.ಬಿ.) ಅಕೌಂಟ್ ಬಗ್ಗೆ ಮಾಹಿತಿ ನೀಡುವ ತರಬೇತಿ ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆ ಜರಗಿತು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣ, ಮಂಜೇಶ್ವರ ಬಿ.ಆರ್.ಸಿ. ಸಭಾಂಗಣ, ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನೆಕ್ಸ್ ಸಭಾಂಗಣ, ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ, ಮಾಲಕ್ಕಾಲ್ ಶಾಲೆ, ಕಾಂಞಂಗಾಡ್ ದುರ್ಗಾ ಶಾಲೆ, ನೀಲೇಶ್ವರ ನಗರಸಭೆ ಪುರಭವನ ಮೊದಲಾದೆಡೆ ಈ ತರಗತಿಗಳು ನಡೆಯಿತು.
ಕನ್ನಡ, ತುಳು ಮತ್ತು ಮಲಯಾಳ ಭಾಷೆಗಳಲ್ಲಿ ಈ ತರಗತಿಗಳು ನಡೆದುವು. ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ 937 ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನೇರಸಂವಾದ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾ ಲೈಸನ್ ಆಫೀಸರ್ ಒ.ಟಿ.ಗಫೂರ್ ತಿಳಿಸಿದರು.