ಬಾಲಸೋರ್: ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರ ಮಧ್ಯೆ ಡಿಆರ್‍ಡಿಒ ಸ್ವದೇಶಿ ನಿರ್ಮಿತ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಒಡಿಶಾದ ಚಂಡೀಪುರದಲ್ಲಿರುವ ಪರೀಕ್ಷಾ ಕೇಂದ್ರದಿಂದ ನಿನ್ನೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಬೆಳಿಗ್ಗೆ 11.5ರ ವೇಳೆಗೆ ಕ್ಷಿಪಣಿ ಉಡಾವಣೆಗೊಂಡಿತು ಎಂದು ಡಿಆರ್‍ಡಿಒ ಮೂಲಗಳು ತಿಳಿಸಿವೆ.
ಸುಮಾರು 25-30 ಕಿ.ಮೀ ಎತ್ತರಕ್ಕೆ ಚಿಮ್ಮುವ ಸಾಮಥ್ರ್ಯ ಹೊಂದಿರುವ ಈ ಕ್ಷಿಪಣಿಯ ಮೊದಲ ಪರೀಕ್ಷೆ 2017ರ ಜೂನ್ 4ರಂದು ನಡೆದಿತ್ತು. ನಂತರ 2019ರ ಫೆಬ್ರವರಿ 26ರಂದು ಒಂದೇ ದಿನ ಎರಡು ಯಶಸ್ವಿ ಪರೀಕ್ಷೆ ನಡೆಯಲಾಗಿತ್ತು.