ಉಪ್ಪಳ: ಕಲೋತ್ಸವಗಳು ಭಾರತೀಯ ಸಂಸ್ಕøತಿಯ ಪ್ರತೀಕ. ಕಲೆಗಳು ಮಾನವನ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ ಎಂದು ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಸಾಕ್ಷರತಾ ಮಿಶನ್ ಆಶ್ರಯದಲ್ಲಿ ಭಾನುವಾರ ಪೈವಳಿಕೆ ಪಂಚಾಯತಿ ಸಾಕ್ಷರತಾ ಕೇಂದ್ರದ ಸಾಕ್ಷರತಾ ಕಲೋತ್ಸವ 2019 ಕಾರ್ಯಕ್ರಮವನ್ನು ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಹಿರಿಯ ಶಿಕ್ಷಕ ರಾಘವ ಬಲ್ಲಾಳ್ ಹಿಂಗಾರ ಅರಳಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನಿತ ವಾಲ್ಟಿ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಲಿಕವಾಗಿ ಅಗಲಿದ ಬಾಬು ಮಾಸ್ತರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಕ್ಷರತಾ ಕೇಂದ್ರದಲ್ಲಿ ಸಹಕರಿಸಿದ ಹಿರಿಯರನ್ನು ಶಾಲು ಹೊದೆಸಿ ಗೌರವಿಸಲಾಯಿತು. ರಾಜ್ಯಪ್ರಶಸ್ತಿ ವಿಜೇತ ರಾಘವ ಬಲ್ಲಾಳ್ ಪೈವಳಿಕೆ, ಗ್ರಾಮಪಂಚಾಯತಿ ಸದಸ್ಯ ಬಶೀರ್ ದೇವಕಾನ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ, ಗೋವಿಂದ ಭಟ್, ಚಿತ್ರನಟ ಬಾಲಕೃಷ್ಣ ಅಡೂರು, ರಾಧಾಕೃಷ್ಣ ಬಲ್ಲಾಳ್, ಚಂದ್ರನಾಯ್ಕ್, ಅಬ್ದುಲ್ ರಹಿಮಾನ್ ಪೈವಳಿಕೆ, ಗ್ರಾಮ ಪಂಚಾಯತಿ ಸಹಾಯಕ ಕಾರ್ಯದರ್ಶಿ ನಾರಾಯಣ, ಪ್ರಸಾದ್ ರೈ, ದೈಹಿಕ ಶಿಕ್ಷಕ ಕೆ.ಎಂ. ಬಲ್ಲಾಳ್, ನೋಡಲ್ ಪ್ರೇರಕ್ ಪರಮೇಶ್ವರ ನಾಯ್ಕ್, ರಫೀಖ್ ಪೈವಳಿಕೆ, ಸುಮಯ್ಯ ಟೀಚರ್, ಸಂಚಾಲಕಿ ವಸಂತಿ, ಹರಿಣಾಕ್ಷಿ, ರಮೇಶ್ ಪೈವಳಿಕೆ, ಮೊಯ್ದು ಕುಟ್ಟಿ ಮಾಸ್ತರ್, ರಾಧಾಕೃಷ್ಣ ಮಾಸ್ತರ್ ಪೈವಳಿಕೆ, ಚಂದ್ರ ನಾಯ್ಕ್, ರವಿಶಂಕರ್ ಉಪಸ್ಥಿತರಿದ್ದರು. ಸಾಕ್ಷರತಾ ಸಂಯೋಜಕ ವಿಶ್ವನಾಥ ಏದಾರ್ ಸ್ವಾಗತಿಸಿದರು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊಯ್ದುಕುಟ್ಟಿ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.