ಪೆರ್ಲ:ಎಣ್ಮಕಜೆ ಪಂಚಾಯಿತಿ 2018-19ನೇ ಸಾಲಿನ ಪರಿಶಿಷ್ಟ ವರ್ಗ(ಟಿ.ಎಸ್.ಪಿ.) ಅನುದಾನದಲ್ಲಿ 9ನೇ ವಾರ್ಡ್ ಗೋಳಿತ್ತಡ್ಕ ಪರಿಶಿಷ್ಟ ವರ್ಗ ಕಾಲೊನಿಗೆ ಮಂಜೂರಾದ ದಾರಿ ದೀಪವನ್ನು ಪಂಚಾಯಿತಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಆಯಿಷಾ ಎ.ಎ.ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಮಾತನಾಡಿದರು.ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ., ಸದಸ್ಯೆ ಪುಷ್ಪಾ ವಿ., ಪ.ವರ್ಗ ಮುಖಂಡ ಕೃಷ್ಣ ನಾಯ್ಕ್, ಪ್ರೊಮೋಟರ್ ನಾರಾಯಣ ನಾಯ್ಕ್ ಜಿ., ಕುಟುಂಬಶ್ರೀ ಸದಸ್ಯೆ ಜಯಲಕ್ಷ್ಮಿ, ಫಲಾನುಭವಿಗಳು ಉಪಸ್ಥಿತರಿದ್ದರು.