HEALTH TIPS

ಮುಳ್ಳೇರಿಯ ಹವ್ಯಕ ಮಂಡಲ ಸಭೆ


      ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ಸಭೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ಜರಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಸಂದರ್ಭ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಠಣ  ಜರಗಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.
   ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ಡಾ ಡಿ ಪಿ ಭಟ್, ಮಹೇಶ್ ಸರಳಿ, ಕೇಶವಪ್ರಸಾದ ಎಡಕ್ಕಾನ, ಕುಸುಮ ಪೆರ್ಮುಖ, ಗೀತಾಲಕ್ಷ್ಮಿ, ದೇವಕಿ ಪನ್ನೆ, ವೈ.ಕೆ. ಗೋವಿಂದ ಭಟ್ ಆಯಾ ವಿಭಾಗಗಳ ವರದಿ, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ಗೋಕರ್ಣದ ಅಶೋಕೆ ಮೂಲಮಠದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠವನ್ನೊಳಗೊಂಡ ಶ್ರೀ ಶಂಕರ ಲೋಕ, ಬೆಂಗಳೂರು ಗಿರಿನಗರ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಮಾಯಣ ಚಾತುರ್ಮಾಸ್ಯ, ವಲಯ ಭಿಕ್ಷಾಸೇವೆ ಮೊದಲಾದ ವಿಷಯಗಳಲ್ಲಿ ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು.
     ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀಗೋವರ್ಧನ ಧರ್ಮಮಂದಿರದಲ್ಲಿ ಜರಗಲಿರುವ ಸಾಮೂಹಿಕ ಆಶ್ಲೇಷಾಬಲಿ ಸೇವೆ ಹಾಗೂ ಆ. 09. ರಂದು ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ವರಮಹಾಲಕ್ಷ್ಮೀ ಪೂಜೆಯ ಕುರಿತು ಸಭೆಯಲ್ಲಿ ಮಾಹಿತಿಗಳನ್ನು ವಿವರಿಸಲಾಯಿತು.
    ಆಧುನಿಕವಾದ ಉಪಕರಣಗಳಿಂದ ಸುವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಾ ಇರುವ ಮುಜುಂಗಾವಿನ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಕುರಿತು ಕೃಷ್ಣ ಮೋಹನ ಎಡನಾಡು ಸಮಗ್ರ ಮಾಹಿತಿಗಳನ್ನು ನೀಡಿದರು. ವಿಷ್ಣುಗುಪ್ತ ವಿದ್ಯಾಪೀಠದ ಕಾರ್ಯಯೋಜನೆಯನ್ನು ಸಮಾಜದಲ್ಲಿ ಪ್ರಸಾರಮಾಡಿ ಕಾರ್ಯಗತಗೊಳಿಸುವ ಬಗ್ಗೆ ಗೋವಿಂದ ಬಳ್ಳಮೂಲೆ, ಶ್ರೀಕೃಷ್ಣ ಭಟ್ ಮೀನಗದ್ದೆ ಮಾಹಿತಿಗಳನ್ನಿತ್ತರು. ಮಹಾಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು ಅವರು ಶ್ರೀಮಠದ ಮುಂದಿನ ಕಾರ್ಯಯೋಜನೆಯಾದ ' ಮಾತೃತ್ವ ' ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗೋಕರ್ಣದ ಅಶೋಕೆ ಮೂಲಮಠದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಯೋಜನೆಗೆ ದೇಣಿಗೆ ಸಮರ್ಪಣೆ ಮಾಡಲಾಯಿತು. ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries