ಕಾಸರಗೋಡು: ಕೇರಳ ರಾಜ್ಯದ ಕಾಸರಗೋಡು ಪ್ರದೇಶದಾದ್ಯಂತ ಕನ್ನಡ ಪರಿಸರಕ್ಕೆ ಮರು ಜೀವ ನೀಡುವ ಹಾಗು ವಿಸ್ತರಣೆಗೊಳಿಸುವ ಉದ್ದೇಶದಿಂದ ಪೆರಿಯದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2019-20 ರ ಶೈಕ್ಷಣಿಕ ವರ್ಷದಿಂದ ಕನ್ನಡ ಅಧ್ಯಯನ ವಿಭಾಗವನ್ನು ಆರಂಭಿಸಿದ್ದು, ಕನ್ನಡ ಎಂ.ಎ. ಪದವಿ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಆಸಕ್ತ ಅಭ್ಯರ್ಥಿಗಳು ಆ.20 ರೊಳಗಾಗಿ ಸೂಕ್ತ ಮೂಲ ದಾಖಲೆಗಳೊಂದಿಗೆ ಬಂದು ದಾಖಲಾಗುವಂತೆ ಕೋರಲಾಗಿದೆ.
ಯಾವುದೇ ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ/ಭಾಷೆಯಾಗಿ ಅಭ್ಯಾಸ ಮಾಡಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು/ಶೇ.45 ಅಂಕಗಳನ್ನು ಪಡೆದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗುವುದು.ಜೊತೆಗೆ ಕರ್ನಾಟಕದ ಅಭ್ಯರ್ಥಿಗಳಿಗೆ, ಕರ್ನಾಟಕ ಸರಕಾರದ ಅಭಿವೃದ್ಧಿ ಪ್ರಾಧಿಕಾರದಿಂದ ರೂ.25000 ವ್ಯಾಸಂಗ ವೇತನವನ್ನು ಪಡೆಯುವ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಪೆÇ್ರ.ಬಿ.ಶಿವರಾಮ ಶೆಟ್ಟಿ(ಕನ್ನಡ ವಿಭಾಗದ ಶೈಕ್ಷಣಿಕ ಸಂಯೋಜಕರು) - 9448952011, 9731108974 ಮತ್ತು ಡಾ.ಸ್ವಾಮಿ ನ.ಕೋಡಿಹಳ್ಳಿ(ಉಪನ್ಯಾಸಕರು) - 82176471018, 9845346098 ನಂಬ್ರದಲ್ಲಿ ಸಂಪರ್ಕಿಸಬಹುದು.