ಬದಿಯಡ್ಕ: ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಗಗನ್ ರಾಮ್ ಇ.ವಿ.ಎಂ.(ಇಲೆಕ್ಟ್ರೋನಿಕ್ ವೋಟಿಂಗ್ ಮಿಶಿನ್) ತಯಾರು ಮಾಡಿ ತನ್ನ ಸಾಧನೆಯಿಂದ ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ.
ಈತ ತಯಾರಿಸಿದ ಮತದಾನ ಯಂತ್ರದ ಮೂಲಕವೇ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಮತದಾನಗೈಯ್ಯಲು ಉಪಯೋಗಿಸಲಾಯಿತು. ಯಾವುದೇ ಅಡಚಣೆಯಿಲ್ಲದೆ ಯಂತ್ರವು ಕಾರ್ಯನಿರ್ವಹಿಸಿದೆ.
ಈತ ಪೆರಿಯ ಪಾಲಿಟೆಕ್ನಿಕ್ ಇಲೆಕ್ಟ್ರಿಕಲ್ ಪ್ರಾಧ್ಯಾಪಕ ಪುರಂದರ ಹಾಗು ಬದಿಯಡ್ಕ ಸರ್ಕಾರಿ ಹೈಸ್ಕೂಲಿನ ಸಂಸ್ಕøತ ಅಧ್ಯಾಪಿಕೆ ಪೂರ್ಣಿಮ ಅವರ ಪುತ್ರ. ಗಗನ್ ರಾಮ್ ಈಗಾಗಲೇ ಹಲವು ಯಂತ್ರೋಪಕರಣಗಳ, ಸ್ವಯಂ ಚಾಲಿತ ಉಪಕರಣಗಳ ತಯಾರಿಯ ಮೂಲಕ ಗಮನ ಸೆಳೆದಿದ್ದಾನೆ.