ಕುಂಬಳೆ: ಕೆನರ ಅಭಿವøದ್ಧಿ ಮತ್ತು ಶಾಂತಿ ಸಂಸ್ಧೆ (ಸಿ.ಒ.ಡಿ.ಪಿ) ಮಂಗಳೂರು ಇದರ ವತಿಯಿಂದ ಸೊಳ್ಳೆ ಪರದೆ ವಿತರಣೆ ಮತ್ತು ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಕುಂಬಳೆ ಚರ್ಚ್ ಹಾಲ್‍ನಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ ಒ ಡಿ ಪಿ ಸಂಸ್ಧೆಯ ನಿರ್ದೆಶಕ ಸ್ವಾಮಿ ಓಸ್ವಲ್ಡ್ ಮೊಂತೇರೊ ಅವರು ವಹಿಸಿದ್ದರು. ಅವರು ಸೊಳ್ಳೆ ಪರದೆ ಪರಿಸರ ನಿವಾಸಿಗಳಿಗೆ ವಿತರಿಸಿ ಮಾತನಾಡಿ ಸಾಂಕ್ರ್ರಾಮಿಕ ರೋಗಗಳು ಬಹಳಷ್ಟು ಹರಡುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸ್ವಚ್ಚತೆಗೆ ಅದ್ಯತೆ ನೀಡುವಂತೆ ಕರೆನೀಡಿದರು.
ಕಾರ್ಯಕ್ರಮವನ್ನು ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮಗುರು ಸ್ವಾಮಿ ಅನಿಲ್ ಪ್ರಕಾಶ್ ಡಿ'ಸಿಲ್ವಾ ಉದ್ಘಾಟಿಸಿ, ಸರ್ಕಾರದ ಯೋಜಣೆಗಳು ಜನಸಾಮಾನ್ಯರಿಗೆ ತಲುಪಿಸುವ ಮಹತ್ವರ ಪಾತ್ರವನ್ನು ಸ್ವಯಂ ಸೇವಾ ಸಂಸ್ಧೆಗಳು ನಿರ್ವಹಿಸುತ್ತಿರುವುದು ಒಳ್ಳೆಯ ವಿಚಾರ. ಇದರ ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಆಸಕ್ತರಾಗಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ ಸಂಸ್ಧೆ ಸಂಯೋಜಕ ರವಿಕುಮಾರ್ ಕ್ರಾಸ್ತಾ ಅವರು ಜನಸಾಮಾನ್ಯರಿಗಿರುವ ವಿವಿಧ ಸರ್ಕಾರಿ ಯೋಜನೆಗಳನ್ನು ಪಡೆಯುವ ಅರ್ಹತೆ, ಅರ್ಜಿನೀಡಬೇಕಾದ ವಿಧಾನದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಕುಂಬಳೆ ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಥೋಮಸ್ ಕ್ರಾಸ್ತ ಹಾಗೂ ಕಾರ್ಯದರ್ಶಿ ಪ್ರೆಸಿಲ್ಲಾ ಡಿ ಸೋಜ, ಸಂಘಟನೆಯ ಅಧ್ಯಕ್ಷ ಡೊಲ್ಫಿ ಡಿ'ಸೋಜ ಶುಭಾಂಸಂಶನೆ ಗೈದರು.ಸಿ.ಒ.ಡಿ.ಪಿ ಸಂಸ್ಧೆಯ ವಿಜಯ ಡಿ'ಸೋಜ ಸ್ವಾಗತಿಸಿ, ಸಂಯೋಜಕ ಪೀಟರ್ ಪೌಲ್ ನಿರೂಪಿಸಿ ವಂದಿಸಿದರು.