ಬದಿಯಡ್ಕ: ಬೆಂಗಳೂರು ಹಿಂದೂಸೇವಾ ಪ್ರತಿಷ್ಠಾನ ಸಂಚಾಲಿತ ಆಶ್ರಯ ಕನ್ನೆಪ್ಪಾಡಿಯ `ಶಾರದಾ' ಶಿಶುಮಂದಿರದಲ್ಲಿ ಶನಿವಾರ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಿಶುಮಂದಿರದ ಹಿರಿಯರಾದ ಗಂಗಾ ಮಾತಾಜಿ ನೇತೃತ್ವವನ್ನು ನೀಡಿ ಮಾತನಾಡಿ ಬಾಲ್ಯಕಾಲದಲ್ಲಿ ಮಕ್ಕಳಿಗೆ ಲಭಿಸುವ ಸಂಸ್ಕಾರಯುತ ಶಿಕ್ಷಣವು ಅವರ ಭವಿಷ್ಯದ ಭದ್ರಬುನಾದಿಯಾಗಬಲ್ಲುದು. ಮನೆಯಿಂದಲೇ ಉತ್ತಮ ಸಂಸ್ಕಾರ ಮಕ್ಕಳಿಗೆ ಲಭಿಸಬೇಕು. ಶಿಶುಮಂದಿರಗಳಲ್ಲಿ ಲಭಿಸುವ ಬಾಲಪಾಠವು ಎಂದೆಂದೂ ಅವರ ಮನದಲ್ಲಿಅಚ್ಚಳಿಯದೆ ಉಳಿಯುತ್ತದೆ. ತಾಯಿಯು ಮಗುವಿಗೆ ಮೊದಲ ಗುರುವಾಗಿ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಮುತುವರ್ಜಿವಹಿಸಬೇಕು ಎಂದು ಅವರು ಪಾಲಕರಿಗೆ ಹಿತನುಡಿಗಳನ್ನಾಡಿದರು. ಪೆರ್ಲ ವಿವೇಕಾನಂದ ಶಿಶುಮಂದಿರದ ಅಧ್ಯಾಪಿಕೆ ಲಾವಣ್ಯ ಉಪಸ್ಥಿತರಿದ್ದರು. ಶಿಶುಮಂದಿರದ ಹೆತ್ತವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಡಳಿತ ಟ್ರಸ್ಟಿ ಶ್ರೀಕೃಷ್ಣ ಭಟ್ ಪುದುಕೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನೆಪ್ಪಾಡಿ ಶಿಶುಮಂದಿರದ ಅಧ್ಯಾಪಿಕೆ ಜ್ಯೋತಿ ಸ್ವಾಗತಿಸಿ, ಗಣೇಶ ಕೃಷ್ಣ ಅಳಕ್ಕೆ ವಂದಿಸಿದರು.