HEALTH TIPS

ಶಾಲೆಗೆ ತಡವಾಗಿ ತಲುಪುವ ಶಿಕ್ಷಕರು: ವಿದ್ಯಾರ್ಥಿಗಳ ಭವಿಷ್ಯ ಅತಂತ್ರತೆಯೆಡೆಗೆ

       
      ಮಂಜೇಶ್ವರ: ಮಂಜೇಶ್ವರ ಉಪ ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಕೆಲವೊಂದು ಶಿಕ್ಷಕರುಗಳು ತಡವಾಗಿ ತಲುಪುತ್ತಿರುವುದಾಗಿ ತಿಳಿದು ಬಂದಿದೆ.
         ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಭವಿಷ್ಯವನ್ನು ಉಜ್ವಲಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಹಾಗೂ ಸಮಯ ಪರಿಪಾಲನೆಯನ್ನು ಕಲಿಸಿಕೊಟ್ಟು ಮಾದರಿಯಾಗಬೇಕಾದ ಶಿಕ್ಷಕರೇ ಶಾಲೆಗಳಿಗೆ ಬೆಳಿಗ್ಗೆ 10.30 ಅಥವಾ 11 ಗಂಟೆಯ ಹೊತ್ತಿಗೆ ತಲುಪುತ್ತಿರುವುದಾಗಿ ಮಾಹಿತಿ ಲಭಿಸಿದೆ. ಸರ್ಕಾರಿ ಶಾಲೆಗಳಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಪರಿಸ್ಥಿತಿಗೆ ತಲುಪಿರುವುದಾಗಿಯೂ ಸಾರ್ವಜನಿಕ ವಲಯದಲ್ಲೂ ಜನರು ಆಡಿಕೊಳ್ಳುತಿದ್ದಾರೆ.
      ಕೆಲವೊಂದು ಅಧ್ಯಾಪಕರುಗಳು ಶಾಲೆಗೆ ತಡವಾಗಿ ಆಗಮಿಸುತ್ತಿರುವುದು ಮಂಜೇಶ್ವರ, ಉದ್ಯಾವರ, ಉಪ್ಪಳ ಮೊದಲಾದ ಪರಿಸರದ ಸಿ ಸಿ ಕ್ಯಾಮರಾಗಳಲ್ಲೂ ಸೆರೆಯಾಗಿರುವ ಬಗ್ಗೆಯೂ ಊರವರು ಮಾಹಿತಿಯನ್ನು ನೀಡುತಿದ್ದಾರೆ. ಇದನ್ನು ಅರಿತ ಕೆಲವೊಂದು ಶಿಕ್ಷಕರು ಸಿ ಸಿ ಕ್ಯಾಮರಾ ಇಲ್ಲದ ದಾರಿಯನ್ನು ಕಂಡುಕೊಂಡು ತಮ್ಮ ಚಾಳಿಯನ್ನು ಮುಂದುವರಿಸಿರುವುದು ಕಂಡುಬಂದಿದೆ.
     ಸಮಯಕ್ಕೆ ಶಾಲೆಗಳಿಗೆ ತಲುಪಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಬೋಧನೆಯನ್ನು ನೀಡಬೇಕಾದ ಅಧ್ಯಾಪಕರುಗಳ ಬೇಜವಾಬ್ದಾರಿತನದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾರುಗಳ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ಇಲ್ಲದೇ ಮೌನವನ್ನು ಪಾಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಧ್ಯಾಪಕರುಗಳು ತಡವಾಗಿ ಬರುವುದನ್ನು ನೋಡಿ ಕೆಲವೊಂದು ಸಿಬ್ಬಂದಿಗಳು ಕೂಡಾ ಇದನ್ನೇ ಚಾಳಿಯಾಗಿಸಿಕೊಂಡಿರುವ ಬಗ್ಗೆಯೂ ಆರೋಪವಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿಯೂ ಹೆತ್ತವರು  ತಿಳಿಸಿರುವರು.
      ಅಭಿಮತ:
     1. ಕೆಲವೊಂದು ಶಿಕ್ಷಕರು ಸರ್ಕಾರದ ಆದೇಶವನ್ನು ಗಾಳಿಗೆ ತೂರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಶಿಕ್ಷಕರು ಕಡ್ದಾಯವಾಗಿ ಬೆಳಿಗ್ಗೆ 10 ಗಂಟೆಗೆ ಮೊದಲು ಹಾಗೂ  ಸಂಜೆ 4 ರ ತನಕ ಶಾಲೆಯಲ್ಲಿ ಇರಬೇಕಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. 
        ಪುಷ್ಪಾ 
    ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು. ಕಾಸರಗೋಡು ಜಿಲ್ಲಾ ಶಿಕ್ಷಣ ಇಲಾಖೆ.
...........................................................................................................................
        2.ಶಾಲೆಗೆ ಕೆಲವೊಂದು ಅಧ್ಯಾಪಕರುಗಳು ತಡವಾಗಿ ತಲುಪುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಇದನ್ನು  ಕಾಸರಗೋಡು ಜಿಲ್ಲಾ ಶಿಕ್ಷಣ ಇಲ್ಲಾಖೆಯ ಉಪ ನಿರ್ದೇಶಕರ ಗಮನಕ್ಕೆ ತರಲಾಗುವುದು. ಈ ತನಕ ನನಗೆ ಯಾವುದೇ ದೂರು ಲಭಿಸಿಲ್ಲ. ಮಂಜೇಶ್ವರ ಉಪ ಜಿಲ್ಲಾ ವ್ಯಾಪ್ತಿಯಲ್ಲಿ ನನಗೆ ಐದು ಶಾಲೆಗಳ ಉಸ್ತುವಾರಿ ಇದೆ. ದೂರು ಲಭಿಸಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ತಿಳಿಸುತ್ತೇನೆ.
              ಹರ್ಷಾದ್ ವರ್ಕಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries