HEALTH TIPS

ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮಸೂದೆಯ ಚರ್ಚೆ

       
       ನವದೆಹಲಿ: ಲೋಕಸಭೆಯಲ್ಲಿ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಗದ್ದಲ ಸೃಷ್ಟಿಸಿದ ಬೆನ್ನಲ್ಲೇ ಗದ್ದಲದ ನಡುವೆಯೇ ನಿನ್ನೆ ಲೈಂಗಿಕ ಅಲ್ಪಸಂಖ್ಯಾತ ಜನರು (ಹಕ್ಕುಗಳ ರಕ್ಷಣೆ ) ಮಸೂದೆ 2019ರ ಕುರಿತು ಚರ್ಚೆ ನಡೆಯಿತು.
     ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರಿಗೆ ತಮ್ಮ ಗುರುತನ್ನು ವ್ಯಾಖ್ಯಾನಿಸಲು ಹಾಗೂ ಅವರ ಮೇಲಿನ ತಾರತಮ್ಯವನ್ನು ನಿಗ್ರಹಿಸುವ ಹಕ್ಕು ನೀಡುತ್ತದೆ. ಈ ಮಸೂದೆಯನ್ನು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ಕ್ರಿಷನ್ ಪಾಲ್ ಗುರ್ಜರ್ ಮಂಡಿಸಿದರು. ಚರ್ಚೆಯ ವೇಳೆ ವಿಪಕ್ಷ ನಾಯಕರು ಸದನದ ಪಡಸಾಲೆಗೆ ಆಗಮಿಸಿ ಕಾಶ್ಮೀರ ವಿವಾದ ಕುರಿತು ಪ್ರತಿಭಟನೆ ನಡೆಸಿದರು. 'ಪ್ರಧಾನ ಮಂತ್ರಿಗಳೇ ಉತ್ತರ ನೀಡಿ' ಎಂದು ಘೋಷಣೆ ಕೂಗಿದರು. ಕಾಂಗ್ರೆಸ್, ಡಿಎಂಕೆ ಹಾಗೂ ಎಐಟಿಸಿ ಸದಸ್ಯರ ಪ್ರತಿಭಟನೆಯಿಂದ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
     ಎಐಟಿಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು,  ಮೊದಲು ಕಾಶ್ಮೀರ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಿದರು. ಸದನ ವ್ಯವಸ್ಥಿತವಾಗಿಲ್ಲದ್ದರಿಂದ ಕಾಶ್ಮೀರದ ವಿವಾದದ ಕುರಿತೇ ಚರ್ಚೆ ನಡೆಯಲಿ ಎಂದರು.
    ಆದರೂ, ಅದಕ್ಕೆ ಲಕ್ಷ್ಯ ಕೊಡದ ಸ್ಪೀಕರ್, ಇನ್ನೋರ್ವ ಸದಸ್ಯರಿಗೆ ಮಸೂದೆ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದರು. ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲತೆ ಒದಗಿಸುತ್ತದೆ. ಇದು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರ ಜೊತೆಗೆ, ನಿಯಮ ಉಲ್ಲಂಘನೆಗೆ ಉತ್ತರದಾಯಿಯನ್ನಾಗಿಸುತ್ತದೆ.
     ಇದು ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆಯ ಕ್ಷೇತ್ರಗಳಲ್ಲಿ ಇವರ ಮೇಲಿನ ತಾರತಮ್ಯ ತೊಡೆಯುವ ಜೊತೆಗೆ, ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸುತ್ತದೆ. ಜೊತೆಗೆ ಮಸೂದೆಯು ಲೈಂಗಿಕ ಅಲ್ಪಸಂಖ್ಯಾತರ ದೂರು ಪರಿಹಾರ ಯೋಜನೆಯೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ರಾಷ್ಟ್ರೀಯ ಪರಿಷತ್ತನ್ನು ಕೂಡ ಆರಂಭಿಸುವ ಪ್ರಸ್ತಾವನೆಯನ್ನು ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries