ಮಂಜೇಶ್ವರ: ಕಲಾ ತರಬೇತಿಗಳ ಮಂಜೇಶ್ವರ ಬ್ಲಾಕ್ ಮಟ್ಟದ ಉದ್ಘಾಟನೆ ಇಂದು ಮಧ್ಯಾಹ್ನ 2 ಗಂಟೆಗೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
ಪರಂಪರಾಗತ, ಸ್ಥಳೀಯ ಕಲಾಪ್ರಕಾರಗಳನ್ನು ಉಳಿಸಿ,ಬೆಳಸುವ ಉದ್ದೇಶದಿಂದ ರಾಜ್ಯ ಸಂಸ್ಕೃತಿ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ರಚಿಸಿರುವ ವಜ್ರಮಹೋತ್ಸವ ಫೆಲೋಶಿಪ್ ಯೋಜನೆ ಅಂಗವಾಗಿ ಈ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭ ಅಂಗವಾಗಿ ಚಿತ್ರಪ್ರದರ್ಶನ, ತಿರುವಾದಿರ ಕಳಿ, ಮಿಮಿಕ್ರಿ ಇತ್ಯಾದಿ ನಡೆಯಲಿವೆ.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸುವರು. ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರಾದ ಬಿ.ಎ.ಮಜೀದ್, ಭಾರತಿ ಜೆ.ಶೆಟ್ಟಿ, ಷಾಹುಲ್ ಹಮೀದ್, ವೈ. ಶಾರದಾ, ಅರುಣ, ಷಂಷಾದ್ ಶುಕೂರ್ ಮೊದಲಾದವರು ಉಪಸ್ಥಿತರಿರುವರು.