ಕಾಸರಗೋಡು: ಭಾರತೀಯ ವಿದ್ಯಾನಿಕೇತನ ಆ.16 ರಂದು ಕೋಟ್ಟಯಂನಲ್ಲಿ ಆಯೋಜಿಸಿರುವ ಕೇರಳ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಸರಗೋಡು ದ್ವಾರಕಗರದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ವಿದ್ಯಾರ್ಥಿಗಳಾದ ಮಂಜುನಾಥ ಶೆಣೈ, ವೈಶಾಕ್ ಕೆ., ಸಂಚಿತ ಎಂ.ಕೆ. ಮತ್ತು ಆಕಾಶ್ ಆರ್. ಅವರು ಆಯ್ಕೆಯಾಗಿದ್ದಾರೆ. ಇವರು ಇತ್ತೀಚೆಗೆ ಮಾವುಂಗಾಲ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಈ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಈ ವಿದ್ಯಾಲಯದ ಅಧ್ಯಾಪಕಿಯಾದ ಮಮತಾ ಅವರು ಯೋಗ ತರಬೇತಿಯನ್ನು ನೀಡಿದ್ದರು.