ಉಪ್ಪಳ: ಕಾಶ್ಮೀರ ರಾಜ್ಯದ ಜನತೆಗೆ ಇದ್ದ ಪ್ರತ್ಯೇಕ ಅಧಿಕಾರ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನೀತಿಗೆದುರಾಗಿ ಮಂಜೇಶ್ವರ ಮಂಡಲ ಎಡರಂಗ ನೇತೃತ್ವದಲ್ಲಿ ಇಂದು(ಆ.7) ಸಂಜೆ ಉಪ್ಪಳದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಸಭೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಉದ್ಘಾಟಿಸುವರು. ಎಡರಂಗದ ಪ್ರಮುಖ ನೇತಾರರಾದ ಪಿ.ಕರುಣಾಕರನ್, ಕೆ.ಪಿ.ಸತೀಶ್ಚಂದ್ರನ್, ಮಾಜಿ ಶಾಸಕ ನ್ಯಾಯವಾದಿ.ಸಿ.ಎಚ್.ಕುಂಞಂಬು, ಎಂ.ವಿ.ಬಾಲಕೃಷ್ಣನ್ ಮಾಸ್ತರ್, ಗೋವಿಂದನ್ ಪಳ್ಳಿಕಾಪ್ಪಿಲ್, ಬಿ.ವಿ.ರಾಜನ್, ಡಾ.ಕೆ.ಎ.ಖಾದರ್, ಕೆ.ಎಸ್.ಫಕ್ರುದ್ದೀನ್, ಸಿದ್ದಿಕ್ ಆಲಿ ಮೊಗ್ರಾಲ್, ವಿ.ಪಿ.ಪಿ.ಮುಸ್ತಫ, ಕೆ.ಆರ್.ಜಯಾನಂದ, ಜಯರಾಮ ಬಲ್ಲಂಗುಡೇಲು, ಅಬ್ದುಲ್ ರಝಾಕ್ ಚಿಪ್ಪಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.