ಕಾಸರಗೋಡು: ಮೀನು ಕೃಷಿಕರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಪಿಲಿಕೋಡ್ ಗ್ರಾಮ ಪಂಚಾಯತ್‍ನಲ್ಲಿ ಮೀನು ಕೃಷಿಕರ ಕ್ಲಬ್ ಆರಂಭಗೊಳ್ಳಲಿದೆ.
ಗ್ರಾಮ ಪಂಚಾಯತ್ ಬಳಿ ನಿರ್ಮಾಣಗೊಳ್ಳುತ್ತಿರುವ ಮೀನು ಕ್ಲಬ್ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ಅನೇಕ ವರ್ಷಗಳಿಂದ ಪಿಲಿಕೋಡ್ ಗ್ರಾಮ ಪಂಚಾಯತ್‍ನಲ್ಲಿ ಅನೇಕ ಮಂದಿ ಸತತ ಮೀನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ಸೆಂಟ್ಸ್ ಜಾಗದಿಂದ ತೊಡಗಿ ಒಂದೂವರೆ ಎಕ್ರೆ ಜಾಗದಲ್ಲಿ ಮೀನು ಕೃಷಿ ನಡೆಸುವವರು ಈಗ ಪಂಚಾಯತ್ ವ್ಯಾಪ್ತಿಯಲ್ಲಿದ್ದಾರೆ.
ಇವರಿಗೆ ಹೆಚ್ಚುವರಿ ತರಬೇತಿ ಒದಗಿಸುವ ನಿಟ್ಟಿನಲ್ಲಿ ಜಾಗೃತಿ ತರಗತಿ, ಪ್ರಾತ್ಯಕ್ಷಿಕೆ, ವಿಚಾರಸಂಕಿರಣ ಒದಗಿಸುವುದಕ್ಕೆ ಈ ವರೆಗೆ ಪಂಚಾಯತ್ ಸಭಾಂಗಣವನ್ನೇ ಆಶ್ರಯಿಸಬೇಕಾಗಿಬರುತ್ತಿತ್ತು. ಸ್ವಂತ ಕಟ್ಟಡ ಲಭ್ಯತೆಯೊಂದಿಗೆ ಸುಧಾರಿತ ರೀತಿ ಈ ಕಾಯಕಗಳನ್ನು ನಡೆಸಬಹುದಾಗಿದೆ. ಜೊತೆಗೆ ಪ್ರೋತ್ಸಾಹ ಒದಗಿಸಿ ಹೆಚ್ಚುವರಿ ಮಂದಿಯನ್ನು ಈ ವಲಯದತ್ತ ಆಕರ್ಷಿತರನ್ನಾಗಿಸುವ ಉದ್ದೇಶದಿಂದ ಕ್ಲಬ್ ನಿರ್ಮಾಣವಾಗುತ್ತಿದೆ.
ಪಂಚಾಯತ್‍ನ 1.70 ಲಕ್ಷ ರೂ.ಮೀನುಗಾರಿಕೆ ಇಲಾಖೆ ನೀಡಿರುವ 5 ಲಕ್ಷ ರೂ. ವೆಚ್ಚದಲ್ಲಿ 3 ಸೆಂಟ್ಸ್ ಜಾಗದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮೂರು ಸ್ಟೋರ್ ರೂಂ, ಬಲೆ ಸಹಿತ ಸಾಮಾಗ್ರಿಗಳನ್ನು ಭದ್ರವಾಗಿರಿಸುವ ಕೋಣೆ ಸಹಿತ ಸೌಲಭ್ಯಗಳು ಇಲ್ಲಿವೆ. ಮೀನುಗಾರಿಕೆಗೆ ಬೇಕಾದ ಬಲೆಗಳು, ನೀರು ಬತ್ತಿಸುವ ಮೋಟಾರು ಇತ್ಯಾದಿಗಳೂ ಕ್ಲಬ್‍ನಲ್ಲಿರುವುವು. ನೀರಿನ ಪಿ.ಎಚ್. ಮೌಲ್ಯ ನಿಗದಿಪಡಿಸುವ ಸೌಲಭ್ಯ ಇಲ್ಲಿ ಕಲ್ಪಿಸಲಾಗಿದೆ.