ನವದೆಹಲಿ: ಇಂದೀಗ ಅಕ್ಟೋಬರ್ ಮಾಸ ಶುರುವಾಗಿದೆ. ಇದೀಗ ಹಬ್ಬಗಳ ಸೀಸನ್ ಸಹ ಪ್ರಾರಂಭಗೊಂಡಿದೆ. ದಸರಾ ಮತ್ತು ದೀಪಾವಳಿ ಎರಡೂ ದೊಡ್ಡ ಹಬ್ಬಗಳು ಈ ಮಾಸದಲ್ಲೇ ಬಂದಿದ್ದು ಜನರು ಶಾಪಿಂಗ್ ಸೇರಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾಗಿರುವ ಸಂಗತಿ ಎಂದರೆ ಬ್ಯಾಂಕುಗಳಿಗೆ ಸಹ ಈ ಮಾಸದಲ್ಲಿ ಅತಿ ಹೆಚ್ಚು ರಜಾದಿನಗಳು ಇರುತ್ತದೆ. ಹಾಗಾಗಿ ಬ್ಯಾಂಕ್ ಗ್ರಾಹಕರು ಈ ರಜಾದಿನಗಳ ಬಗೆಗೆ ಮೊದಲೇ ಅರಿವು ಮೂಡಿಸಿಕೊಳ್ಳುವುದು ಉತ್ತಮ.
ಅಕ್ಟೋಬರ್ 26 ರಿಂದ ಅಕ್ಟೋಬರ್ 29 ರವರೆಗೆ ನಾಲ್ಕು ದಿನಗಳ ಕಾಲ ಸರಣಿ ರಜೆ ಸೇರಿದಂತೆ ಒಟ್ಟು 11 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದೆ. ಈ ಸಮಯದಲ್ಲಿ ಬ್ಯಾಂಕುಗಳು ಮುಚ್ಚುವುದಷ್ಟೇ ಅಲ್ಲದೆ ಎಟಿಎಂಗಳಲ್ಲಿ ಸಹ ಹಣ ದೊರಕದಂತಾಗಬಹುದು. ಆದುದರಿಂದ ಗ್ರಾಹಕರು ಹಣ ವಿತ್ ಡ್ರಾ ಮಾಡುವುದು ಅಥವಾ ;ಲಾಕರ್ ನಿರ್ವಹಣೆ ಮಾಡಬೇಕಾದರೆ ಇದಕ್ಕೆ ಮುಂಜಗ್ರತೆಯಾಗಿ ರಜಾ ದಿನಗಳ ಬಗೆಗೆ ಮಾಹಿತಿ ಪಡೆಯುವುದು ಉತ್ತಮ.ನೀವು ಶಾಖೆಯಲ್ಲಿ ಬ್ಯಾಂಕ್‍ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬೇಕಾದರೆ, ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ.
ಕೇಂದ್ರ ಸರ್ಕಾರ ಘೋಷಿಸಿದ ರಜಾದಿನಗಳು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಅನ್ವಯಿಸುತ್ತವೆ. ಆದಾಗ್ಯೂ, ದಿನಾಂಕಗಳು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿರಬಹುದು. ಅಕ್ಟೋಬರ್‍ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ನಿಮ್ಮ ಬ್ಯಾಂಕಿನ ರಜಾದಿನಗಳ ಪಟ್ಟಿಯನ್ನು ಹತ್ತಿರದ ಶಾಖೆಯಿಂದ ಖಾತ್ರಿಪಡಿಸಿಕೊಳ್ಳಿರಿ.