ನವದೆಹಲಿ: 13 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ನಿನ್ನೆ ಪ್ರಕಟ ಮಾಡಿದೆ.
ಅಸ್ಸಾಂ, ಬಿಹಾರ, ಛತ್ತೀಸ್ ಗಡ, ಹಿಮಾಚಲ ಪ್ರದೇಶ, ಕೇರಳ, ಮಧ್ಯ ಪ್ರದೇಶ, ಮೇಘಾಲಯ, ಒಡಿಶಾ, ಪಂಜಾಬ್, ರಾಜಸ್ತಾನ, ಸಿಕ್ಕಿಂ, ತೆಲಂಗಾಣ ಮತ್ತು ಉತ್ತರ ಪ್ರದೇಶಗಳ ವಿಧಾನಸಭಾ ಉಪ ಚುನಾವಣೆಗಾಗಿ 32 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಪ್ರಕಟ ಮಾಡಿದರು.
ಅಸ್ಸಾಂ ರಾಜ್ಯಕ್ಕೆ ನಾಲ್ವರು, ಕೇರಳಕ್ಕೆ ಐವರು, ಉತ್ತರ ಪ್ರದೇಶದಲ್ಲಿ 10, ಬಿಹಾರ, ಛತ್ತೀಸ್ ಗಡ, ಮೇಘಾಲಯ, ಮಧ್ಯ ಪ್ರದೇಶ, ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳಿಗೆ ತಲಾ ಒಬ್ಬರ ಹೆಸರು ಇರುವ ಪಟ್ಟಿಯನ್ನು ಜೆಪಿ ನಡ್ಡಾ ಪ್ರಕಟಗೊಳಿಸಿದ್ದಾರೆ.
ಕೇರಳದ ವೆಟ್ಟಿಯೂರ್ ಕಾವ್ ಕ್ಷೇತ್ರಕ್ಕೆ ಎಸ್.ಸುರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಕೊನ್ನಿ ಕ್ಷೇತ್ರದಲ್ಲಿ,ಎರ್ನಾಕುಳಂ ಕ್ಷೇತ್ರದಲ್ಲಿ ಸಿ.ಜಿ.ರಾಜಗೋಪಾಲ್ ಹಾಗೂ ಅರೂರಿನಲ್ಲಿ ಯುವಮೋರ್ಚಾ ನೇತಾರ ಕೆ.ವಿ.ಪ್ರಕಾಶ್ ಬಾಬು ಮತ್ತು ಮಂಜೇಶ್ವರದಲ್ಲಿ ಕುಂಟಾರು ರವೀಶ ತಂತ್ರಿ ಯವರನ್ನು ಅಭ್ಯರ್ಥಿಗಳಾಗಿ ಘೋಶಿಸಲಾಗಿದೆ.