ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ದರ ಭಾನುವಾರ ಪ್ರತಿ ಸಿಲಿಂಡರ್ ಗೆ 15 ರೂಪಾಯಿ 50 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಸಿಲಿಂಡರ್ ಒಂದರ ದರ 590 ರೂಪಾಯಿ ಆಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಸಬ್ಸಿಡಿ ರಹಿತ ಅಡುಗೆ ಅನಿಲ ಗ್ರಾಹಕರು ವಾರ್ಷಿಕವಾಗಿ 14. 2 ಕೆಜಿಯ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಬಹುದಾಗಿದ್ದು, ಇವುಗಳ ದರ 574.5 ರೂಪಾಯಿಯಿಂದ 590 ರೂಪಾಯಿಗೆ ಹೆಚ್ಚಳವಾಗಿದೆ.
ಪ್ರತಿ ತಿಂಗಳ ಮೊದಲ ದಿನದಿಂದು ಎಲ್ ಪಿಜಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗುತ್ತದೆ. ಭಾರತೀಯ ರೂಪಾಯಿ ವಿರುದ್ಧ ಡಾಲರ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಏರಿಕೆ ಮಾಡಲಾಗಿದೆ.
ಇದೇ ವೇಳೆ ವೈಮಾನಿಕ ಇಂಧನ (ಏವಿಯೇಷನ್ ಟರ್ಬೈನ್ ಪ್ಲ್ಯುಯಲ್ ದರವನ್ನು ತೈಲ ಕಂಪನಿಗಳು ಪರಿಷ್ಕರಿಸಿವೆ. ಜೆಟ್ ಇಂಧನ ದರ ಶೇ, 1 ರಷ್ಟು ಕಡಿಮೆಯಾಗಿದೆ. ದೆಹಲಿಯಲ್ಲಿ ಎಟಿಎಫ್ ದರ ಪ್ರತಿ ಕಿಲೋ ಲೀಟರ್ ಗೆ 596. 62 ರೂ. ಇಳಿಕೆಯಾಗಿದ್ದು, ಪ್ರತಿ ಕಿಲೋ ಲೀಟರ್ ಎಟಿಎಫ್ 62, 698. 86 ಪೈಸೆ ಆಗಿದೆ.