ಬದಿಯಡ್ಕ: ನೀರ್ಚಾಲು ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 15ನೇ ವರ್ಷದ ಶ್ರೀ ಗಣೇಶೋತ್ಸವ, ಗಣಪತಿ ಹವನ, ಶ್ರೀ ಸತ್ಯವಿನಾಯಕ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸೋಮವಾರ ನೀರ್ಚಾಲು ಅಶ್ವತ್ಥಕಟ್ಟೆ ಪರಿಸರದಲ್ಲಿ ಜರಗಿತು.
ಪ್ರಾತಃಕಾಲ 7ಕ್ಕೆ ದೀಪ ಪ್ರತಿಷ್ಠೆ, ಗಣಪತಿಹವನ, ಪೂವಾಹ್ನ 10.30 ರಿಂದ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ದೊಡ್ಡಡ್ಕ ಪುತ್ತೂರು ಇವರಿಂದ ವಿಶೇಷ ನೃತ್ಯ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 12 ಕ್ಕೆ ಸತ್ಯವಿನಾಯಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಮಧ್ಯಾಹ್ನ 1ರಿಂದ 3ರ ತನಕ ಸುಧಾಕರ ಕೋಟೆಕುಂಜತ್ತಾಯ ಇವರು `ಭಕ್ತ ಮಾರ್ಕಾಂಡೇಯ' ಎಂಬ ಹರಿಕಥಾ ಸತ್ಸಂಗ ನೀಡಿದರು. ಅಪರಾಹ್ನ 3 ರಿಂದ ನಡೆದ ಧಾರ್ಮಿಕ ಸಭೆಯಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ, ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆದ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ಮಾಸ್ತರ್ ಏಣಿಯರ್ಪು ಧಾರ್ಮಿಕ ಭಾಷಣ ಮಾಡಿದರು. ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು. ಈ ಸಂದರ್ಭ ರ್ಯಾಂಕ್ ವಿಜೇತ ವಿದ್ಯಾರ್ಥಿ ಶ್ರೀಕೃಷ್ಣ ಕಡಪ್ಪು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೈದಿಕ ಕ್ಷೇತ್ರದ ಸಾಧನೆಗಾಗಿ ವೇದಮೂರ್ತಿ ಶಂಕರನಾರಾಯಣ ಭಟ್ ಪಾಂಡೇಲು, ಹಿರಿಯ ಧಾರ್ಮಿಕ ಮುಂದಾಳು ತಿಮ್ಮಪ್ಪ ಪಾಟಾಳಿ ಇವರಿಗೆ ಗೌರವಾರ್ಪಣೆ ನಡೆಯಿತು.ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಏಣಿಯರ್ಪು ಸ್ವಾಗತಿಸಿ, ರವೀಂದ್ರ ಮಾಸ್ತರ್ ನೀರ್ಚಾಲು ವಂದಿಸಿದರು. 2018-19 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನೂ ಈ ಸಂದರ್ಭ ವಿತರಿಸಲಾಯಿತು. ಸಂಜೆ 6.30 ರಿಂದ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ನಡೆಯಿತು.