ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.
ಇತ್ತೀಚಿಗಷ್ಟೇ ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್ (ಡೀಸೆಲ್?), ಸೆಲೆರಿಯೋ, ಇಗ್ನಿಸ್?, ಸ್ವಿಪ್ಟ್? ಡಿಸೈರ್ (ಡೀಸೆಲ್?), ವಿಟಾರ ಬ್ರೀಜಾ ಮತ್ತು ಎಸ್ ಕ್ರಾಸ್ ಕಾರುಗಳ ಬೆಲೆಯಲ್ಲಿ 5 ಸಾವಿರ ಕಡಿತ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆ ಈಗ ಜನಪ್ರಿಯ ಬಲೆನೊ ಕಾರಿನ ಬೆಲೆಯನ್ನುಕಡಿತ ಮಾಡಿದೆ.
ಬಲೆನೊ ಕಾರಿನ ಬೆಲೆ 8.88 ಲಕ್ಷ ರೂ. ಆಗಿದ್ದು, ಇಂದಿನಿಂದ ಈ ಕಾರಿನ ಬೆಲೆ ಒಂದು ಲಕ್ಷ ಕಡಿತವಾಗಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ದೆಹಲಿಯಲ್ಲಿ ಮಾರುತಿ ಸುಜುಕಿ ಬಾಲೆನೊ ಆರ್ ಎಸ್ ಮಾದರಿಯ ಎಕ್ಸ್ ಶೋ ರೂಂ ಬೆಲೆ ರೂ. 8.88 ಲಕ್ಷ ರೂ. ಇದ್ದು, ಅದು ಈಗ 7.88 ಲಕ್ಷ ರೂಪಾಯಿಗೆ ಇಳಿಕೆಯಾಗಲಿದೆ.