ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕೀಕಾನದ ನಲಂದಾ ಪಬ್ಲಿಕ್ ಸ್ಕೂಲ್‍ನಲ್ಲಿ ಸೆ.2 ರಂದು ಅಪರಾಹ್ನ 3 ರಿಂದ ಕಾಸರಗೋಡು ದಸರಾ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದಲ್ಲಿ ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ದೇವಳ ಅಧ್ಯಕ್ಷ ಬಾಲಕೃಷ್ಣ ಎಂ.ಮಲ್ಲಿಗೆಮಾಡು ಅವರು ಅಧ್ಯಕ್ಷತೆ ವಹಿಸುವರು. ನಲಂದಾ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ನಿರಂಜನ ಕೊರಕ್ಕೋಡು್ಯುದ್ಘಾಟಿಸುವರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಸೌಮ್ಯಾ ಪ್ರಸಾದ್ ಅವರು ದಸರಾ ವಿಶೇಷೋಪನ್ಯಾಸ ನೀಡುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅಭ್ಯಾಗತರಾಗಿ ಭಾಗವಹಿಸುವರು. ಚಾಮುಂಡಿಗುಡ್ಡೆ ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಮೊಕ್ತೇಸರ ಹರಿಶ್ಚಂದ್ರ ನಾಯ್ಕರ ಹಿತ್ತಿಲು ಅವರನ್ನು ಗೌರವಿಸಲಾಗುವುದು. ಕವಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಶುಭಹಾರೈಸುವರು. ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕೋಟೆಕಣಿ, ಗೌರೀಶಂಕರ ಮುಕ್ಕೋಟ್ಟು, ಸಂದೇಶ್ ಕೋಟೆಕಣಿ ಉಪಸ್ಥಿತರಿರುವರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಚಿತ್ತರಂಜನ್ ಕಡಂದೇಲು ಅವರಿಂದ ಏಕ ವ್ಯಕ್ತಿ ಯಕ್ಷಗಾನ `ವೀರ ಬಬ್ರುವಾಹನ', ಕಿರಣ್ ಕಲಾಂಜಲಿ ಅವರಿಂದ `ಸತ್ಯದರ್ಶನ' ಏಕ ವ್ಯಕ್ತಿ ನಾಟಕ ಮತ್ತು ದಿವಾಕರ ಪಿ.ಅಶೋಕನಗರ ಹಾಗು ಸುಜಿತ್ ಬೇಕೂರು ಅವರಿಂದ ದಸರಾ ಗೀತೆಗಳ ಗಾಯನ ನಡೆಯಲಿದೆ.