HEALTH TIPS

ದೇಲಂಪಾಡಿ : 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ


       ಮುಳ್ಳೇರಿಯ: ದೇಲಂಪಾಡಿಯ 35ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಶ್ರೀ ರಾಮ ಭಜನಾ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡು ವಿವಿಧ ಸ್ಪರ್ಧೆಗಳು ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
     ಬೆಳ್ಳಿಪ್ಪಾಡಿ ಶ್ರೀ ಶಾರದಾಂಬ ಭಜನಾ ಮಂದಿರದಿಂದ ವಾದ್ಯಘೋಷದೊಂದಿಗೆ ಶ್ರೀ ಗಣೇಶನ ವಿಗ್ರಹವನ್ನು ತಂದು ದೇಲಂಪಾಡಿಯ ಶ್ರೀ ರಾಮ ಭಜನಾ ಮಂದಿರದಲ್ಲಿ ಮೂರ್ತಿ ಪ್ರತಿಷ್ಠೆ ಮತ್ತು ಗಣಹೋಮವನ್ನು ನಡೆಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಹಲವಾರು ಭಜನಾ ಮಂದಿರಗಳ ಭಜನಾ ಸಮಿತಿಯವರಿಂದ ಭಜನೆ, ಮಹಾ ಪೂಜೆ-ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು.
       ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬೆಳ್ಳಿಪ್ಪಾಡಿ ಬಾಲಕೃಷ್ಣ ಗೌಡ ಅವರು ಅಧ್ಯಕ್ಷತೆ ವಹಿಸಿದ್ದು, ಶ್ರೀ ದೇವಿ ನಾಗರಾಜ ಭಟ್ ಸುಳ್ಯಅವರು ಶ್ರೀ ಗಣೇಶನ ಜನ್ಮ ವೃತ್ತಾಂತ  ಹಾಗೂ ಆಚರಣೆಯ ಮಹತ್ವದ ಕುರಿತಾಗಿ ಧಾರ್ಮಿಕ ಉಪನ್ಯಾಸವನ್ನಿತ್ತರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಡ್ಕ ವಲಯದ ಮೇಲ್ವಿಚಾರಕ ಉದಯ ಅವರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ದೇಲಂಪಾಡಿ ಶ್ರೀ  ಗಣೇಶೋತ್ಸವ ಸಮಿತಿಯ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ ಬೆಳ್ಳಿಪ್ಪಾಡಿ ಸದಾಶಿವ ರೈ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಸನ್ಮಾನಕ್ಕೆ ಉತ್ತರವಾಗಿ ಸಮಿತಿಯು ನಡೆದು ಬಂದ ದಾರಿ ಹಾಗೂ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಮ್ಮಾನಿತರ ಬಗ್ಗೆ ಯಕ್ಷಗಾನ ಕಲಾವಿದ ಬಿ.ಎಚ್.ವೆಂಕಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು. ಸಮಿತಿಯ ಗೌರವಾಧ್ಯಕ್ಷ ಉಜಂಪಾಡಿ ವಿಶ್ವನಾಥ ರೈ  ಅಭಿನಂದಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಡೆಸಿದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ  ವಸಂತ ರೈ ಶಾಂತಿಮಲೆ ಅವರು ಬಹುಮಾನ ವಿತರಿಸಿದರು. ಬ್ಯಾಂಡ್ ವಾಧ್ಯ ಘೋಷಗಳ ವೈಭವದೊಂದಿಗೆ ಶೋಭಾಯಾತ್ರೆ ನಡೆದು ಉಜಂಪಾಡಿ-ಮಣಿಯೂರು ಶ್ರೀ ಶಾಸ್ತಾರ ದೇವರ ಸನ್ನಿ„ಯ ಮುಂಭಾಗದ ತೊರೆಯಲ್ಲಿ ವಿಗ್ರಹ ವಿಸರ್ಜಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries