HEALTH TIPS

ಬದಿಯಡ್ಕದಲ್ಲಿ 48ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆ -- ವಿಶ್ವಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ರಾಷ್ಟ್ರ ನಮ್ಮ ಭಾರತ : ಕೆ.ಪಿ.ಹರಿದಾಸ್


      ಬದಿಯಡ್ಕ: ಶ್ರೇಷ್ಠವಾದ ಸಂಸ್ಕಾರವನ್ನು ಹೊಂದಿದ, ಅನೇಕ ಪ್ರಭಾವೀ ವ್ಯಕ್ತಿಗಳಿಗೆ ಜನ್ಮ ನೀಡಿದ, ವಿಶ್ವಕ್ಕೇ ಅನೇಕ ಕೊಡುಗೆಗಳನ್ನು ನೀಡಿದ ರಾಷ್ಟ್ರ ಭಾರತವಾಗಿದೆ. ಸಂಪದ್ಭರಿತವಾದ ನಮ್ಮ ದೇಶವನ್ನು ಅನೇಕರು ಕೊಳ್ಳೆ ಹೊಡೆದುಕೊಂಡರು. ಕೊನೆಗೆ ಬ್ರಿಟೀಷರ ದಾಸ್ಯತ್ವದ ಜೀವನದಿಂದ ನಮಗೆ ಮುಕ್ತಿ ಸಿಕ್ಕಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮನೆ ಮನೆಗಳಲ್ಲಿದ್ದ ಗಣೇಶ ಹಬ್ಬವನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಹಿಂದೂ ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಪಿ.ಹರಿದಾಸ್ ಹೇಳಿದರು.
       ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಸೋಮವಾರ ಜರಗಿದ 48ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸವನ್ನು ನೀಡುತ್ತಾ ಅವರು ಮಾತನಾಡುತ್ತಿದ್ದರು.
     ಟಿಪ್ಪುವಿನ ಆಳ್ವಿಕೆಯಲ್ಲಿ ಅನೇಕ ಹಿಂದೂ ಪ್ರಾರ್ಥನಾಮಂದಿರಗಳನ್ನು, ದೇವಸ್ಥಾನಗಳನ್ನು ದ್ವಂಸಮಾಡಲಾಯಿತು. ಬ್ರಿಟೀಷರ ಆಕ್ರಮಣಕ್ಕೆ ಎದುರಾಗಿ ಸ್ವಾತಂತ್ರ್ಯ ಸಮರದ ಕಾಲಘಟ್ಟದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಸಂಘಟಿಸುವ ಮೂಲಕ ಊರಿನ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದರೊಂದಿಗೆ ಒಗ್ಗಟ್ಟಿನ ಮಂತ್ರವನ್ನು ಜಪಿಸುವಲ್ಲಿ ಕಾರಣಕರ್ತರಾದರು ಎಂದರು.
ಬದಿಯಡ್ಕದ ಪ್ರಖ್ಯಾತ ವೈದ್ಯ ಡಾ| ಸೂರ್ಯ ಎನ್.ಶಾಸ್ತ್ರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
      ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಬಿ. ನರಸಿಂಹ ಶೆಣೈ ಸ್ವಾಗತಿಸಿ, ಲೆಕ್ಕಪರಿಶೋಧಕ ನರೇಂದ್ರ ಬಿ.ಎನ್.ವಂದಿಸಿದರು. ಕಾರ್ಯದರ್ಶಿ ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಿಸಿದರು.
        ಗಣೇಶ ವಿಗ್ರಹಪ್ರತಿಷ್ಠೆ :
   ಸೋಮವಾರ ಬೆಳಿಗ್ಗೆ ಸೂರ್ಯೋದಯ ಕಾಲದಲ್ಲಿ ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ವೇ.ಮೂ. ಪಟ್ಟಾಜೆ ವೆಂಕಟೇಶ್ವರ ಭಟ್ ಗಣಪತಿ ವಿಗ್ರಹ ಪ್ರತಿಷ್ಠೆ, ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ, ವಿವಿಧ ಸ್ಪರ್ಧೆಗಳು ನಡೆದುವು. ಮಧ್ಯಾಹ್ನ ಮಹಾಪೂಜೆಯಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು.  ಅಪರಾಹ್ನ ಪಟ್ಟಾಜೆ ಗೋಪಾಲ ಭಟ್ ಮತ್ತು ಬಳಗದವರಿಂದ ಯಕ್ಷಗಾನ ಬಯಲಾಟ `ಮಹಿಷಮರ್ಧಿನಿ', ಬದಿಯಡ್ಕ ಗಣೇಶ ಭಕ್ತವೃಂದ ಮಹಿಳಾ ಘಟಕದಿಂದ ತಿರುವಾದಿರ, ಭರತನಾಟ್ಯ ಪ್ರವೀಣೆ ರಾಧಿಕಾ ಶೆಟ್ಟಿ ಮತ್ತು ಬಳಗದವರಿಂದ ನಾಟ್ಯಸಿಂಚನ ಜನಮನಸೂರೆಗೊಂಡಿತು.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries