ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬೇಂಕ್‍ನ ವಾರ್ಷಿಕ ಮಹಾಸಭೆಯು ಗುರುವಾರ ಅಪರಾಹ್ನ ನೀರ್ಚಾಲು ಪ್ರಧಾನ ಕಚೇರಿಯ ನೂತನ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಬೇಂಕ್ ಕಾರ್ಯದರ್ಶಿ ಅಜಿತಕುಮಾರಿ 2018-19ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. 2019 ಮಾರ್ಚ್ 30ರಂದು ಕೊನೆಗೊಳ್ಳುವ ಪ್ರಸಕ್ತ ವರ್ಷದ ಲೆಕ್ಕಾಚಾರದ ಪ್ರಕಾರ ಒಟ್ಟು 163.30 ಕೋಟಿಯ ವ್ಯವಹಾರ ನಡೆಸಲಾಗಿದೆ. 23.58 ಲಕ್ಷರೂ.ಗಳ ಲಾಭವಿದೆ. ಪ್ರಳಯ ಬಾಧಿತರಿಗೆ ಸಹಾಯಹಸ್ತವಾಗಿ 4 ಲಕ್ಷರೂ. ಹಾಗೂ ನೌಕರವೃಂದದವತಿಯಿಂದ 30 ಸಾವಿರ ರೂ. ನೀಡಲಾಗಿದೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಬ್ಯಾಂಕ್ ನ ಪ್ರಗತಿಗೆ ಎಲ್ಲರ ಸಹಕಾರ ಅತೀ ಮುಖ್ಯ ಎಂದ ತಿಳಿಸಿ ಪ್ರಸಕ್ತ ಸಾಲಿನಲ್ಲಿ ಶೇ. 5 ಲಾಭಾಂಶ ಘೋಷಿಸಿದರು.
ನಿರ್ದೇಶಕರುಗಳಾದ ಶಂಕರನಾರಾಯಣ ಶರ್ಮ ನಿಡುಗಳ, ರವಿಕಾಂತ ಕೇಸರಿ ಕಡಾರು, ಶ್ರೀಕೃಷ್ಣ ಭಟ್ ಪುದುಕೋಳಿ, ಶ್ರೀಕೃಷ್ಣ ಭಟ್ ವಳಕ್ಕುಂಜ, ಸ್ವರ್ಣಲತಾ, ಪ್ರೇಮಕುಮಾರಿ, ಜಯಂತಿ, ಸುಬ್ರಹ್ಮಣ್ಯ ಏನಂಕೋಡ್ಲು ಪಾಲ್ಗೊಂಡಿದ್ದರು. ಬ್ಯಾಂಕ್‍ನ ಉಪಾಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ ಸ್ವಾಗತಿಸಿ, ನಿರ್ದೇಶಕ ಶ್ಯಾಮ ಭಟ್ ಮಲ್ಲಡ್ಕ ವಂದಿಸಿದರು. ಬೇಂಕ್‍ನ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.